Tuesday, 5 September 2023

 2014-15 ರ ಪಂಚಾಯತ್ ಚುನಾವಣೆ ಎಲ್ಲಾ ಹಳ್ಳಿಗಳಲ್ಲೂ ಬೀರುಸಿನ ಪೈಪೋಟಿ ಏರ್ಪಟ್ಟಿತ್ತು, ನಮ್ಮ ಊರಿನಲ್ಲಿ ಈ ಹಿಂದೆ ನಡೆದ ಅದೇಷ್ಟೋ ಚುನಾವಣೆ ಶಾಂತಿಯಿಂದ ನಡೆದ ಉದಾಹರಣೆಗಳು ಸಿಗುತ್ತವೆ, ಆದರೆ 2014-15 ರ ಚುನಾವಣೆ ಸ್ವಲ್ಪ ರಂಗೇರಿತ್ತು.. ಪಂಚಾಯತ್ ಎಲೇಕ್ಷನ ಬಂದರೆ ಅದು ಸುಮ್ಮನೆ ಮುಗಿಯುವುದಿಲ್ಲ,, ಹಳ್ಳಿಯ ಮಂದಿಯ ಒಗ್ಗಟ್ಟನ್ನು ಮೂರಿಯುವ ಕೆಲಸವೇ ಪಂಚಾತಿ ಎಲೇಕ್ಷನ ಕೆಲಸ....

ನಮ್ಮೂರು ಎಲ್ಲಾ ಜಾತಿಯವರು ಅನ್ಯೋನ್ಯತೆ ಯಿಂದ ಇದ್ದರು.. ಆದರೆ ಯಾರೋದೊ ಇಬ್ಬರ ಪೈಪೋಟಿ ಇಡೀ ಊರು ಎರಡು ಪಾಲಾಯ್ತು.. ರಂಗೇರಿದೆ ಚುನಾವಣೆ ಕೈ ಕೈ ಮಿಲಾಯಿಸುವ ಹಂತ ದಾಟಿತು.. ಸಂಬಂಧಗಳು ಹೋಡೆದು ಹೋದವು.,, ಎಲ್ಲರೂ ದಾಯಾದಿಗಳು ಆದರೂ... ಗಂಡುಮಕ್ಕಳು ಪ್ರತಿ ಚುನಾವಣೆಯಲ್ಲೂ ದಾಯಾದಿಗಳು ಆಗುವರು.. ಆದರೆ ನಮ್ಮೂರಲ್ಲಿ ಅಕ್ಕಿ ತಂಗಿಯಂತೆ ಇದ್ದ ಮಹಿಳೆಯರು,, ಜಡೆ ಹಿಡ್ಕೊಂಡು ರಸ್ತೆಯಲ್ಲಿ ನಿಂತರು.... ನಾವು ಕಿರಗೂರಿನ ಗಯ್ಯಾಳಿಗಳು ಬಗ್ಗೆ ಕೇಳಿದ್ದೇವೆ,,, ಆದರೆ ಕಣ್ಣಾರೆ ಕಂಡಿದ್ದು ನಮ್ಮೂರಲ್ಲಿ.... ಚುನಾವಣೆಯ ರಂಗು ಎಲ್ಲರ ಮೈ ಹಂಟಿತ್ತು...ಗೆದ್ದವನ ಸೋತವನ ಮಧ್ಯೆ ನಾವು ಬಲಿಪಶು ಆಗಬಾರದೆಂದು.. ಕೊಲ್ಲಾಪುರ ಬಾಬುರಾವ್ ಬೇಕರಿಗೆ ಕೆಲಸಕ್ಕೆ ನನ್ನ ಬಾಲ್ಯದ ಗೆಳೆಯರು,, ವೆಂಕನಗೌಡ ಮತ್ತು ಸಂತೋಷ ಜೊತೆ ಬ್ಯಾಗ ಹೇಗಿಲಿಗೆ ಹಾಕೋಂಡು ಊರ ಬಿಟ್ಟಿವಿ......


ಎಲೆಕ್ಷನ್ ಸ್ಪರ್ಧೆ ಮಾಡಿದವರು ಒಂದೇ ತಟ್ಟೆಯಲ್ಲಿ ಊಟ ಮಾಡ್ತಾರೆ,, ಒಂದೇ ಬಾಟಲಿಯಲ್ಲಿ ಎಣ್ಣೆ ಹೋಡಿತ್ತಾರೆ.... ಆದರೆ ಊರಿನ ಜನ ಇನ್ನೂ ವೈಮನಸ್ಸು ಮಾಡಿಕೊಂಡು,ತಿರುಗುತ್ತಾ ಇದಾರೆ...



No comments:

Post a Comment