Saturday, 9 December 2017


PDO ಅಧ್ಯಯನ ಸಾಮಗ್ರಿ 11

1) ಎಲ್ಲ ಸರ್ಕಾರಿ ಯೋಜನೆಗಳ ಫಲಾನುಭವಿಗಳನ್ನು ಗುರುತಿಸುವ ಅಧಿಕಾರ ಯಾರದು?
a) ಗ್ರಾಮ ಪಂಚಾಯಿತಿಯದು
b) ವಾರ್ಡ ಸಭೆಯದು
c) ಗ್ರಾಮ ಸಭೆಯದು
d)  ಜಿಲ್ಲಾಧಿಕಾರಿಯದು
C ✔✔
2) 2003 ರ ತಿದ್ದುಪಡಿ ಪ್ರಕಾರ್ ಗ್ರಾಮ ಪಂಚಾಯಿತಿ ಸಭೆಗಳ ಅವಧಿ ?
a) ತಿಂಗಳಿಗೆ ಎರಡು ಭಾರಿ
b) ತಿಂಗಳಿಗೊಮ್ಮೆ
c)  ಎರಡು ತಿಂಗಳಿಗೊಮ್ಮೆ
d) ವಾರಕ್ಕೊಮ್ಮೆ
B ✔✔
3) ಗ್ರಾಮ ಸಭೆಗಳು ಮತ್ತು ವಾರ್ಡ ಸಭೆಗಳ ಒಂದು ವರ್ಷದಲ್ಲಿ ಕನಿಷ್ಠ ಎಷ್ಟು ಭಾರಿ ಸಭೆ ಸೇರಬೇಕು?
a) ಒಮ್ಮೆ
b) ಎರಡು
c) ಮೂರು
d) ನಾಲ್ಕು
B ✔✔
4) 2003 ರ ತಿದ್ದುಪಡಿ ಪ್ರಕಾರ ಪ್ರತಿ ಗ್ರಾಮ ಪಂಚಾಯತಿಗೆ ನಿಗಿದಿಯಾದ ಶಾಸನಬದ್ದ ಅನುದಾನದ ಮೊತ್ತ ಎಷ್ಟು?
a) ಒಂದು ಲಕ್ಷ ರೂ
b) ಎರಡು ಲಕ್ಷ ರೂ
c) ನಾಲ್ಕು ಲಕ್ಷ ರೂ
d) ಐದು ಲಕ್ಷ  ರೂ
D ✔✔
5 )ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮದ 1993 ಕ್ಕೆ ಮಾಡಲಾದ 47 ತಿದ್ದುಪಡಿಗಳು ಜಾರಿಯಾದ ವರ್ಷ?
a) 1995
b) 1997
c) 1999
d) 2003
D ✔✔
6) ಪಂಚಾಯಿತರಾಜ್ ಸಂಸ್ಥೆಗಳ ಚುನಾವಣೆಯನ್ನು ಯಾರು ನಡೆಸುತ್ತಾರೆ?
a) ಮುಖ್ಯರ ಚುನಾವಣಾ ಆಯುಕ್ತರು
b) ಕೇಂದ್ರ ಚುನಾವಣಾ ಆಯುಕ್ತರು
c) ರಾಜ್ಯಪಾಲರು
d) ರಾಜ್ಯ ಚುನಾವಣಾ ಆಯುಕ್ತರು
D ✔️✔️
7) ಜಿಲ್ಲಾ ಯೋಜನೆ ಸಮಿತಿಗೆ ಯಾರು ಉಪಾಧ್ಯಕ್ಷರಾಗಿರುತ್ತಾರೆ?
a) ಜಿಲ್ಲಾ ಪಂಚಾಯಿತಿಯ ಅಧ್ಯಕ್ಷರು
b) ಸದಸ್ಯರಲ್ಲಿ ಆಯ್ಕೆ ಮಾಡಿದ ಒಬ್ಬರು
c) ಜಿಲ್ಲಾ ಕೇಂದ್ರ ಸ್ಥಾನದಲ್ಲಿರುವ ನಗರ ಸ್ಥಳೀಯ ಸಂಸ್ಥೆಯ ಅಧ್ಯಕ್ಷರು
d) ಉಪಾಧ್ಯಕ್ಷರು
C ✔✔
8) ಎಲ್ಲಿ  ಎರಡು ಶ್ರೇಣಿ ಪಂಚಾಯತ್ ರಾಜ ವ್ಯವಸ್ಥೆ  ಇರುತ್ತದೆ?
a) ಕೇಂದ್ರಾಡಳಿತ ಪ್ರದೇಶಗಳಲ್ಲಿ
b) ದೆಹಲಿಯಲ್ಲಿ
c) 20 ಲಕ್ಷಕ್ಕಿಂತ ಕಡಿಮೆ ಜನಸಂಖ್ಯೆ ಇರುವೆಡೆಯಲ್ಲಿ
d) 10 ಲಕ್ಷ ಜನಸಂಖ್ಯೆ ಇರುವಕಡೆ
C ✔✔
  9) ಹಿತಾಸಕ್ತಿಯನ್ನು ಹೊಂದಿದ್ದ ಸದಸ್ಯನು ಮತ ಚಲಾಯಿಸಿದರೆ ಯಾವ ದಂಡನೆ ವಿಧಿಸಬಹುದು?
a) ರೂ.500 ಗಳವರೆಗೆ ವಿಸ್ತರಿಸಬಹುದಾದಂತಹ ಜುಲ್ಮಾನೆ
b) ಮೂರು ತಿಂಗಳು ಸಾದಾ ಸೆರವಾಸ್
c) ರೂ. 1000 ಗಳವರೆಗೆ ವಿಸ್ತರಿಸಬಹುದಾದಂತಹ ಜುಲ್ಮಾನೆ
d) ಒಂದು ತಿಂಗಳು ಸಾದಾ ಸೆರವಾಸ್
D ✔✔
10) ಗ್ರಾಮ ಪಂಚಾಯಿತಿಯ ಸದಸ್ಯರಾಗಿ ಚುನಾಯಿತ ಸದಸ್ಯನಾಗಿರಲು?
a) ಒಬ್ಬ ವ್ಯಕ್ತಿಯ ಕಡ್ಡಾಯವಾಗಿ ತನ್ನ ಕುಟುಂಬದ ಸದಸ್ಯರುಗಳು ಉಪಯೋಗಕ್ಕಾಗಿ ಶೌಚಗೃಹವನ್ನು ಹೊಂದಿರಬೇಕು
b) ಒಬ್ಬ ವ್ಯಕ್ತಿಯ ತನ್ನ ಕುಟುಂಬದ ಸದಸ್ಯರುಗಳ ಉಪಯೋಗಕ್ಕಾಗಿ ಶೌಚಗೃಹವನ್ನು ಹೊಂದಿರುವ ಅವಶ್ಯಕತೆ ಇರುವುದಿಲ್ಲ
c) ಒಬ್ಬ ವ್ಯಕ್ತಿಯ ಕಡ್ಡಾಯವಾಗಿ ಶೌಚಗೃಹವನ್ನು ಉಪಯೋಗಿಸುತ್ತಿರಬೇಕು
d) ಒಬ್ಬ ವ್ಯಕ್ತಿಯ ಶೌಚಗೃಹವನ್ನು ಉಪಯೋಗಿಸುತ್ತಿರ ಬಾರದು
A ✔✔
11) ಗ್ರಾಮ ಪಂಚಾಯಿತಯ ಕರ್ತವ್ಯಗಳನ್ನು ನೆರವೇರಿಸಲು ನಿಗದಿಪಡಿಸುವ ಅಧಿಕಾರ ಯಾರಿಗಿರುತ್ತದೆ?
a) ತಾಲ್ಲೂಕು ಪಂಚಾಯಿತಿಯ ಕಾರ್ಯನಿರ್ವಾಹಕ ಅಧಿಕಾರಿಗಳು
b) ತಾಲ್ಲೂಕು ಪಂಚಾಯಿತಿ
c) ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಗಳು
d) ತಾಲ್ಲೂಕು ಪಂಚಾಯಿತಿಯ ಅಧ್ಯಕ್ಷರು
A ✔✔
12) ಗ್ರಾಮ ಪಂಚಾಯಿತಿ ಸದಸ್ಯರ ಹುದ್ದೆಯ ಅವಧಿಯ ಈ ಯಾವ ದಿನಾಂಕದಿಂದ ಆರಂಭವಾಗುತ್ತದೆ?
a) ಚುನಾಯಿತರಾದ ದಿನಾಂಕದಿಂದ
b) ಕಛೇರಿಗೆ ಹಾಜರಾದ ದಿನಾಂಕದಿಂದ
c) ಪ್ರಮಾಣ ಕೈಗೊಂಡ ದಿನಾಕದಿಂದ
d) ಗ್ರಾಮ ಪಂಚಾಯಿತಿಯ ಪ್ರಥಮ ಸಭೆಗೆ ಗೊತ್ತುಪಡಿಸಿದ ದಿನಾಂಕದಿಂದ
D ✔✔
13) ಗ್ರಾಮ ಪಂಚಾಯಿತಿಗೆ ಆಡಳಿತಾಧಿಕಾರಿ ಅಥವಾ ಆಡಳಿತ ಸಮಿತಿಯನ್ನು ಯಾರು ನೇಮಿಸುತ್ತಾರೆ?
a) ಉಪವಿಭಾಗಾಧಿಕಾರಿಗಳು
b) ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಗಳು
c) ತಹಶೀಲ್ದಾರ್
d) ಜಿಲ್ಲಾಧಿಕಾರಿಗಳು
A ✔✔

14) ಗ್ರಾಮ ಸಭೆಯನ್ನು ಒಂದು ವರ್ಷದಲ್ಲಿ ಕನಿಷ್ಠ ಎಷ್ಟು ಭಾರಿ ಕರೆಯಬೇಕು?
a) ನಾಲ್ಕು
b) ಮೂರು
c) ಎರಡು
d) ಒಂದು
C ✔✔
15 ) ಗ್ರಾಮ ಪಂಚಾಯತಿಯ ಕಾನೂನುಬಾಹಿರ ಆದೇಶ ಅಥವಾ ನಿರ್ಣಯದ ಜಾರಿಯನ್ನು ಅಮಾನತ್ತುಗೊಳಿಸಲು ಯಾರು ಅಧಿಕಾರ ಹೊಂದಿರುತ್ತಾರೆ?
a) ಜಿಲ್ಲಾ ಪಂಚಾಯತಿ
b) ತಾಲ್ಲೂಕು ಪಂಚಾಯತಿ
c) ಗ್ರಾಮ ಪಂಚಾಯತಿ
d) ಮೇಲಿನ ಎಲ್ಲಾ ಮೂವರು
C ✔✔

*200 Antonyms*
🎭🎭🎭🎭🎭🎭🎭🎭
1. Inevitable- Avoidable
  ಅನಿವಾರ್ಯ- ನಿವಾರಿಸಬಹುದಾದ
2. Exceptional- Common
ಅಸಾಧಾರಣ - ಸಾಮಾನ್ಯ
3. Permanent- Temporary
ಶಾಶ್ವತ - ತಾತ್ಕಾಲಿಕ
4. Dim- Luminous
ಮಂದ - ಪ್ರಕಾಶಕ
5. Reckless- Careful
ಅಜಾಗರೂಕತೆ - ಜಾಗರೂಕತೆ
6. Explicit- Ambiguous
ಸ್ಪಷ್ಟ - ಅಸ್ಪಷ್ಟ
7. Incredible- Believable
ನಂಬಲಾಗದ - ನಂಬಬಹುದಾದ
8. Repel- Attract
ಹಿಮ್ಮೆಟ್ಟಿಸುವ - ಆಕರ್ಷಿಸುವ
9. Rapidly- Slowly
ವೇಗವಾಗಿ - ನಿಧಾನವಾಗಿ
10. Meticulous- Careless
ಸೂಕ್ಷ್ಮ - ಅಸಡ್ಡೆ
11. Barbarous- Civilized
ಕ್ರೂರ - ನಾಗರಿಕ
12. Successor- Predecessor
ಉತ್ತರಾಧಿಕಾರಿ - ಪೂರ್ವಾಧಿಕಾರಿ
13. Urban- Rural
ನಗರ - ಗ್ರಾಮೀಣ
14. Conclusive- Indecisive
ನಿರ್ಣಾಯಕ - ಅನಿಶ್ಚಿತ
15. Terminate-Begin
ಕೊನೆಗಾಣಿಸು - ಆರಂಭಿಸು
16. Niggardly- Lavishly
ಜಿಪುಣುತನದಿಂದ - ಅದ್ದೂರಿಯಾಗಿ
17. Advanced- Receded
ಮುಂದುವರಿದ - ತಗ್ಗಿದ
18. Enlightened- Ignorant
ಪ್ರಬುದ್ಧ - ಅಜ್ಞಾನ
19. Moderate- Extreme
ಮಧ್ಯಮ- ತೀವ್ರ (ಕಟ್ಟಕಡೆಯ)
20. Superficial- Thorough
ಬಾಹ್ಯ - ಸಂಪೂರ್ಣ
21. Scorn- Admiration
ತಿರಸ್ಕಾರ - ಮೆಚ್ಚುಗೆ
22. Trivial- Serious
ಕ್ಷುಲ್ಲಕ - ಗಂಭೀರ
23. Loquacious- Reserved
ವಾಚಾಳಿಯಾದ - ಬಿಗುಮಾನಿ
24. Confiscate- Release
ಕಸಿದುಕೊಳ್ಳು - ಬಿಡುಗಡೆ
25. Often- Rarely
ಸಾಮಾನ್ಯ- ವಿರಳ
26. Eminent- Notorious
ಶ್ರೇಷ್ಠ - ಕುಖ್ಯಾತ
27. Embark upon- Conclude
ಕೈಗೊಳ್ಳು - ಮುಗಿಸು
28. Diffidence- Boldness
ಸಂಕೋಚ -ಧೈರ್ಯ
29. Paucity- Plenty
ಅಭಾವ - ಸಾಕಷ್ಟು
30. Triggered- Choked
ಪ್ರಚೋದನೆ - ನಾಶ
31. Fastidious- Adjustable
ಮೆಚ್ವಿಸಲು ಕಷ್ಟವಾದ - ಹೊಂದಾಣಿಕೆಯ
32. Grandiose- Simple
ಮಹತ್ವಪೂರ್ಣ- ಸಾಮಾನ್ಯ
33. Bleak- bright
ಕರಾಳವಾದ - ಪ್ರಕಾಶಮಾನವಾದ
34. Insolent- Humble
ದಿವಾಳಿ - ವಿನಮ್ರ
35. Lurid- Mild
ಭಯಂಕರ- ಸೌಮ್ಯ
36. Unscrupulous- Conscientious
ನಿರ್ಲಜ್ಜ - ಆತ್ಮಸಾಕ್ಷಿಯ
37. Melodious- Tuneless
ಇಂಪಾದ - ರಾಗವಿಲ್ಲದ
38. Contaminate- Purify
ಮಲಿನ- ಶುದ್ಧೀಕರಣ
39. Frugal- Extravagant
ಮಿತವ್ಯಯದ-ಅತಿಯಾದ
40. Falling off- Improvement
ಕುಸಿಯು - ಉತ್ತಮಗೊಳ್ಳು
41. Genial- Unkind
ಗದ್ದದ - ಕ್ರೂರಿ
42. Shallow- Deep
ಆಳವಲ್ಲದ - ಆಳವಾದ
43. Immune- Vulnerable
ಪ್ರತಿರಕ್ಷಣಾ- ದುರ್ಬಲ
44. Veneration- Disrespect
ಗೌರವ - ಅಗೌರವ
45. Yield to- Resist
ಉತ್ಪನ್ನ - ತಡೆ
46. Concur- Disagree
ಘಟಿಸುತ್ತದೆ - ಒಪ್ಪಿಗೆ ಇಲ್ಲ
47. Vague- Precise
ಅಸ್ಪಷ್ಟ - ನಿಖರ
48. Humility- Pride
ನಮ್ರತೆ - ಹೆಮ್ಮೆ
49. Extol- Censure
ಮೆಚ್ಚಿಕೊಂಡಾದು - ಖಂಡನೆ
50. Takes off- Lands
ಮೇಲೇರು - ಭೂಮಿ ಗೆ ತಾಗು
51. Demolish- Build
ಕೆಡೆವು - ನಿರ್ಮಿಸು
52. Prevent- Induce
ತಡೆಗಟ್ಟು - ಒಪ್ಪಿಸು
53. Frailty- Strength
ದೌರ್ಬಲ್ಯ- ಶಕ್ತಿಯುತ
54. Collapse- Rise
ಕುಸಿತ - ಏಳು
55. Anxious- Carefree
ಆಸಕ್ತಿ - ನಿರಾಸಕ್ತಿ
56. Thrifty- wasteful
ಪ್ರವರ್ಧಮಾನ - ವ್ಯರ್ಥ
57. Innovate- Copy
ನಾವೀನ್ಯ - ನಕಲು
58. Enduring- Fleeting
ನಿರಂತರ - ಕ್ಷಣಿಕ
59. Progressive- Retrogressive
ಪ್ರಗತಿಪರ - ಮುಖ್ಯ
60. Purposely- Unintentionally
ಉದ್ದೇಶಪೂರ್ವಕವಾಗಿ- ಅನುದ್ದೇಶಪೂರ್ವಕವಾಗಿ
61. Brave- Timid
ಕೆಚ್ಚೆದೆಯ- ಅಂಜುಬುರುಕ
62. Opaque- Transparent
ಅಪಾರದರ್ಶಕ - ಪಾರದರ್ಶಕ
63. Hinder- Encourage
ತಡೆ - ಉತ್ತೇಜಿಸು
64. Zeal- Apathy
ಉತ್ಸಾಹ- ನಿರಾಸಕ್ತಿ
65. Shimmering-Gloomy
ಮಿನುಗು- ಕತ್ತಲೆ
66. Plausible- Implausible/ Unbelievable
ತೋರಿಕೆಯ - ಮೀರಿದ/ ನಂಬಲಾಗದ
67. Flair- Inability
ಸಾಮರ್ಥ್ಯ- ಅಸಾಮರ್ಥ್ಯ
68. Dormant- Active
ಸುಪ್ತ - ಸಕ್ರಿಯ
69. Hazy- Clear
ಮಸುಕಾದ - ಸ್ಪಷ್ಟ
70. Fantastic- Ordinary
ಕಲ್ಪನಾತೀತ - ಸಾಮಾನ್ಯ
71. Asceticism- Luxury
ವೈರಾಗ್ಯ - ಐಷಾರಾಮಿ
72. Dissolution- Establishment
ವಿಸರ್ಜನೆಯ - ಸ್ಥಾಪನೆ
73. Unnerved- Confident
ನರಗುಂದಿದ- ವಿಶ್ವಾಸ
74. Harmony- Disagreement
ಸಾಮರಸ್ಯ - ಭಿನ್ನಾಭಿಪ್ರಾಯ
75. Guilty- Innocent
ತಪ್ಪಿತಸ್ಥ - ಮುಗ್ಧ
76. Duplicity- Honesty
ನಕಲಿ - ಪ್ರಾಮಾಣಿಕ
77. Jocular- Morose
ತಮಾಷೆಯ - ಗಂಭೀರ
78. Uncompromising- Flexible
ಸೋಲದ - ರಾಜಿಯಾಗುವ
79. Desecration- Consecration
ಅಪವಿತ್ರಗೊಳಿಸಿತೆಂದು - ಪ್ರತಿಷ್ಠೆ ಯ
80. Far-fetched- Realistic
ಅವಾಸ್ತವಿಕ - ವಾಸ್ತವಿಕ
81. Parallel- Crooked
ಸಮಾನಾಂತರ - ಡೊಂಕಾದ
82. Blocked- Facilitated
ನಿರ್ಬಂಧಿತ - ಅನುಕೂಲಕರ
83 Turn coat- Loyal
ಪ್ರತಿ ಕವಚ - ನಿಷ್ಠಾವಂತ
84. Embellish- Spoil
ಚಂದ ಮಾಡು - ಕೆಡಿಸು
85. Intentional- Accidental
ಉದ್ದೇಶಪೂರ್ವಕ - ಆಕಸ್ಮಿಕ
86. Expand- Contract
ವಿಸ್ತರಿಸು, ಹರಡು - ಒಪ್ಪಂದ
87. Stimulate- Discourage
ಉತ್ತೇಜಿತ- ವಿರೋಧಿಸು
88. Perilous- Safe
ಅಪಾಯಕಾರಿ - ಸುರಕ್ಷಿತ
89. Audacious- Timid
ದಿಟ್ಟ - ಅಂಜುಬುರುಕ
90. Quiet- Pandemonium
ಪ್ರಶಾಂತ - ಗದ್ದಲ
91. Genuine- Fictitious
ನಿಜವಾದ - ಕಾಲ್ಪನಿಕ
92. Implicit- Explicit
ಸೂಚ್ಯ, ಧ್ವನಿತ - ಸ್ಪಷ್ಟ, ಪ್ರಕಟ
93. Repulsive- Attractive
ವಿಕರ್ಷಣ - ಆಕರ್ಷಕ
94. Escalate- Decrease
ಹತ್ತುವುದು - ಇಳಿಸು
95. Commotion- Tranquility
ಗದ್ದಲ - ಶಾಂತ
96. Manifested- Concealed
ಸ್ಪಷ್ಟವಾಗಿ - ಮರೆಮಾಚುವ
97. Vindictive- Forgiving
ಪ್ರತಿಕಾರಕ - ಕ್ರಮಿಸುವ
98. Inaugurate- Terminate
ಉದ್ಘಾಟನಾ - ಕೊನೆಗಾಣಿಸು
99. Detest- Like
ಹೇಸು - ಇಷ್ಟಪಡು
100. Commence- end
ಪ್ರಾರಂಭಿಸು - ಅಂತ್ಯ
101. Prosperity- Adversity
ಏಳಿಗೆ - ಪ್ರತಿಕೂಲ
102. Deliberate- Unintentional
ಉದ್ದೇಶಪೂರ್ವಕ - ಅನುದ್ದೇಶಿತ
103. Disputable- Indisputable
ಚರ್ಚಾಸ್ಪದ - ನಿರ್ವಿವಾದ
104. Make- Break
ಮಾಡು - ಮುರಿ
105. Depressed- Elated
ಖಿನ್ನತೆ - ಸಂತೋಷದಿಂದ
106. Ham-fisted- Adroit
ಅಕುಶಲ - ಕೈಚಳಕದ
107. Capture- Liberate
ಸೆರೆಹಿಡಿ - ಸ್ವಾತಂತ್ರ್ಯ
108. Misery- Joy
ದುಃಖ - ಸಂತೋಷ
109. Anarchy- Order
ಅರಾಜಕತೆ - ಶ್ರೇಣಿ
110. Monotony- Variety
ಏಕತಾನತೆ - ವಿವಿಧ
111. Latter- Former
ನಂತರದ - ಮಾಜಿ
112. Diligent- Lazy
ಪರಿಶ್ರಮಿ - ಸೋಮಾರಿ
113. Philistine- Cultured
ಅನಾಗರಿಕ - ಸುಸಂಸ್ಕೃತ
114. Ingest- Disgorge
ತೆಗೆದುಕೊ - ಹೊರಹಾಕು
115. Laceration- Healing
ಸೀಳುವಿಕೆ - ಚಿಕಿತ್ಸೆ
116. Disorderly- Organized
ಶಿಸ್ತಿಲ್ಲದ - ಸಂಘಟಿತ
117. Glossy- Dull
ಹೊಳಪು - ಮಂದ
118. Accomplish- Fail
ಸಾಧಿಸುವ- ಸೋಲುವ
119. Orderly- Chaotic
ಕ್ರಮಬದ್ಧವಾಗಿ - ಅಸ್ತವ್ಯಸ್ಯವಾಗಿ
120. Strife- Peace
ಕಲಹ - ಶಾಂತಿ
121. Antique- Recent
ಪುರಾತನ - ನವ್ಯ
122. Rapid- Slow
ಬೇಗ - ನಿದಾನ
123. Initiated- Concluded
ಪ್ರಾರಂಭಿಕ - ಅಂತಿಮ
124. Fatigued- Rigid
ದಣಿವು - ದಣಿಯದ, ಕಠಿಣ
125. Dynamic- Static
ಕ್ರಿಯಾತ್ಮಕ - ಸ್ಥಿರ
126. Hereditary- Acquired
ಅನುವಂಶಿಕ - ಸಂಪಾದಿತ
127. Heretical- Orthodox  ‌ಅಸಾಂಪ್ರದಾಯಿಕ - ಸಾಂಪ್ರದಾಯಿಕ
128. Implicate- Exonerate
ತೊಡಗಿಸು - ನಿರ್ದೂಷಗೊಳಿಸು
129. Liberty- Slavery
ಸ್ವಾತಂತ್ರ್ಯ- ಜೀತ
130. Elevation- Reduction
ಎತ್ತರದ - ತಗ್ಗಿದ, ಕಡಿತ
131. Boon- Bane
ವರ - ಕೇಡು, ವಿಷ
132. Famous- Obscure
ಖ್ಯಾತ - ಅಸ್ಪಷ್ಟ
133. Gloomy- Radiant
ಕತ್ತಲೆ - ಪ್ರಕಾಶಮಾನ
134. Isolation- Association
ಪ್ರತ್ಯೇಕವಾದ - ಸಂಘದ
135. Contented- Dissatisfied
ತೃಪ್ತ - ಅತೃಪ್ತ
136. Severe- Mild
ತೀವ್ರ - ಸೌಮ್ಯ
137. Fatigued- Energised
ದಳಿದ - ಶಕ್ತಿ
138. Flexible- Rigid
ಹೊಂದಿಕೊಳ್ಳುವ, ಮೆದುವಾದ - ಕಠಿಣ
139. Delete- Include
ಅಳಿಸು - ಸೇರಿಸು
140. Evanescent- Eternal
ಮಾಸುವ - ಶಾಶ್ವತ
141. Virtue- Vice
ಸದ್ಗುಣ - ಕೆಟ್ಟ ಗುಣ
142. Confident- Diffident
ಭರವಸೆ - ಸಂಕೋಚ
143. Adamant- Yielding
ಅಚಲ - ಬಗ್ಗುವ
144. Callous- Sensitive
ಕಲ್ಲೆದೆಯ - ಸೂಕ್ಷ್ಮ
145. Procrastinate- Expedite
ತಡಮಾಡು - ಚುರುಕು
146. Probity- Dishonesty
ಪ್ರಾಮಾಣಿಕತೆ - ಅಪ್ರಾಮಾಣಿಕತೆ
147. Sporadic- Continual
ವಿರಳ - ನಿರಂತರ
148. Apposite- Inappropriate
ಸಮಂಜಸ - ಸೂಕ್ತವಲ್ಲದ
149. Chivalry- Cowardice
ಅಶ್ವದಳದ - ಹೇಡಿ
150. Sanguine temper- Despairing nature
ಉತ್ಸಾಹಿ - ಹತಾಶವಾದಿ
151. Imperil- Safeguard
ಗಂಡಾಂತರದ- ರಕ್ಷಣಾ
152. Consolidated- Disjoined
ಏಕೀಕೃತ - ಏಕೀಕೃತವಲ್ಲದ
153. Vituperative- Laudatory
ನಿಂದಾತ್ಮಕ - ಹೊಗಳಿಕೆಯ
154. Benefactor- Enemy
ಪೋಷಕ - ಶತ್ರು
155. Barren- Fertile
ಬಂಜರು - ಫಲವತ್ತಾದ
156. Nervous- Composed
ಅಸ್ಥಿರ - ಸಂಯೋಜನೆ
157. Evident- Hidden
ಸ್ಪಷ್ಟವಾಗಿ - ಅಡಗಿ
158. Professional- Amateur
ವೃತ್ತಿಪರ - ಹವ್ಯಾಸಿ
159. Cessation- Commencement
ಸಮಾಪ್ತಿ - ಶುರುವಾದ
160. Potent- Weak
ಪ್ರಬಲ - ದುರ್ಬಲ
161. Gregarious- Unsociable
ಸಂಘಜೀವಿ - ಸಮಾಜರಹಿತ
162. implication- Exoneration
ಗೋಜಲನ್ನು - ದೋಷಮುಕ್ತ ಗೊಳಿಸುವಿಕೆ
163. Dismal- Bright
ಮಬ್ಬುಗವಿದ - ಬೆಳಕಿನ
164. Meagre- Surplus
ತೆಳ್ಳನೆಯ - ಹೆಚ್ಚುವರಿ
165. Flamboyant- Not showy
ದಿನಕಳೆದಂತೆ - ಬೆಡಗಿನ
166. Chronic- Temporary
ದೀರ್ಘಕಾಲದ - ತಾತ್ಕಾಲಿಕ
167. Awkward- Graceful
ನಯವಿಲ್ಲದ - ಆಕರ್ಷಕವಾದ
168. Despair- Hope
ಹತಾಶೆ - ಭರವಸೆ
169. Validate- Disprove
ಖಾಯಂಗೊಳಿಸು- ಅಲ್ಲಗೆಳೆಯುವ
170. Smug- Dissatisfied
ಠಾಕು, ವ್ಯಾಸಂಗ ವ್ಯಸನಿ - ಅಸಮಧಾನ
171. Vicious- Virtuous
ಅನೈತಿಕ - ನೈತಿಕ
172. Obscure- Clear
ಅಸ್ಪಷ್ಟ - ಸ್ಪಷ್ಟ
173. Enervate- Strengthen
ದರ್ಬಲಗೊಳಿಸು - ಬಲಗೊಳಿಸು
174. Autonomous- Dependent
ಸ್ವಾಯತ್ತ - ಅವಲಂಬಿತ
175. Exonerate- Convict
ನಿರ್ದೋಷಗೊಳಿಸು - ಕೈದಿ
176. Controversial- Indisputable
ವಿವಾದಾತ್ಮಕ - ನಿರ್ವಿವಾದ
177. Accord- Disagreement
ಸಮ್ಮತಿ - ಅಸಮ್ಮತಿ
178. Feasible- Impractical
ಕಾರ್ಯಸಾಧ್ಯ - ಅಪ್ರಾಯೋಗಿಕ
179. Acquit- Condemn
ಖುಲಾಸೆ - ಖಂಡನೆ, ಅಪರಾದಿ
180. Affluence- Poverty
ಸಂಪತ್ತು - ಬಡತನ
181. Harmonious- Discordant
ಸಾಮರಸ್ಯ - ಅಸಂಗತ
182. Factual- Unrealistic
ವಾಸ್ತವಿಕ - ಅವಾಸ್ತವಿಕ
183. Assent- Disagreement
ಒಪ್ಪಿಗೆ - ಅಸಮ್ಮತಿ
184. Discreet- Careless in behavior
ವಿವೇಚನಾಯುಕ್ತ - ವಿವೇಚನರಹಿತ
185. Unjust- Fair-minded
ಅನ್ಯಾಯದ- ನ್ಯಾಯಯುತ
186. Oppressive- Gentle
ದುರ್ಭರ - ಮೃದುವಾದ
187. Clinch- Lose
ಗೆಲ್ಲು - ಸೋಲು
188. To put up with- To dislike
ಸಮ್ಮತಿಸು - ಅಸಮ್ಮತಿ
189. Deceitful- Honest
ಸಂಚಿನ, ಉಪಾಯದ - ಪ್ರಾಮಾಣಿಕ
190. Exaggerate- Understate
ಉತ್ಪ್ರೇಕ್ಷೆ - ಕುಂದಿಸಿ ನುಡಿ
191. Synthetic- Natural
ಕೃತಕ - ನೈಜ
192. Infirmity- Strength
ದೇಹ ದೌರ್ಬಲ್ಯ - ಬಲ
193. Deny- Accept
ನಿರಾಕರಿಸು - ಸ್ವೀಕರಿಸು
194. Benediction- Curse
ಆಶೀರ್ವಾದ - ಶಾಪ
195. Forbid- Permit
ನಿಷೇಧಿಸಿದ - ಪರವಾನಗಿ
196. Inconspicuous- Prominent
ಅಪ್ರಜ್ಙಾಪೂರ್ವಕ - ಪ್ರಖ್ಯಾತ
197. Abandon- Retain
ಪರಿತ್ಯಜಿಸು - ಮರಳಿಪಡೆ
198. Fickle- Constant
ಚಂಚಲ - ಸ್ಥಿರ
199. Articulate- Unable to express oneself.
ಅಭಿವ್ಯಕ್ತಿಯ- ಅಭಿವ್ಯಕ್ತಪಡಿಸದ
200. Humble- Powerful
ವಿನಮ್ರ - ಶಕ್ತಿಶಾಲಿ



Thank You
Honnu Meti

Tuesday, 14 November 2017

✍🌹 *ಮಕ್ಕಳ ದಿನಾಚರಣೆ*
👫👫👫👫👫👫👫👫👫

*"Let us sacrifice our today so that our children can have a better tomorrow." Happy Children's Day!*
*ಮಕ್ಕಳ ದಿನಾಚರಣೆ ಶುಭಾಶಯಗಳು !!*

® *ಜವಹರ್ ಲಾಲ್ ನೆಹರೂ ಅವರಿಗೆ ಮಕ್ಕಳೆಂದರೆ ಬಲು ಇಷ್ಟವಂತೆ. ಮಕ್ಕಳು ಕೊಟ್ಟ ಗುಲಾಬಿಯನ್ನು ತಮ್ಮ ಕೋಟಿನ ಜೇಬಿಗೆ ಸೇರಿಸಿ ಸಂತೋಷಪಡುತ್ತಿದ್ದರಂತೆ. ಮಕ್ಕಳು ಮತ್ತು ಹೂವುಗಳನ್ನು ಹೋಲಿಸುತ್ತಿದ್ದ ನೆಹರು, "ಮಕ್ಕಳೆಂದರೆ ಹೋದೋಟದಲ್ಲಿರುವ ಸುಂದರ ಮೊಗ್ಗುಗಳು" ಎನ್ನುತ್ತಿದ್ದರಂತೆ. ಪುಟ್ಟ ಮಕ್ಕಳ ಕುರಿತು ಕಾಳಜಿ ವಹಿಸಬೇಕು, ಮಕ್ಕಳನ್ನು ಪ್ರೀತಿಯಿಂದ ಪೋಷಿಸಬೇಕು, ಮಕ್ಕಳೇ ದೇಶದ ಭವಿಷ್ಯ ಹಾಗೂ ನಾಳಿನ ನಾಗರಿಕರು ಎಂಬುದು ನೆಹರು ಅಭಿಮತ. ಮಕ್ಕಳ ಮೇಲಿದ್ದ ಇವರ ಅಕ್ಕರೆ, ಪ್ರೀತಿಯ ಸಂಕೇತವಾಗಿ ಅವರ ಜನ್ಮದಿನವನ್ನು ದೇಶದಾದ್ಯಂತ ಮಕ್ಕಳ ದಿನಾಚರಣೆ ಎಂದು ಆಚರಿಸಲಾಗುತ್ತದೆ.*

🌹✍ *ಮಕ್ಕಳ ದಿನಾಚರಣೆ’ ಹುಟ್ಟಿದ್ದು ಹೀಗೆ...*

☘ *ವಿ.ಎನ್. ಕುಲಕರ್ಣಿ ಎನ್ನುವವರು 1951ರಲ್ಲಿ ವಿಶ್ವಸಂಸ್ಥೆಯ ಒಂದು ಯೋಜನೆಯಡಿಯಲ್ಲಿ ಇಂಗ್ಲೆಂಡ್‌ನ ಮಕ್ಕಳ ಕಲ್ಯಾಣಕ್ಕಾಗಿ ದುಡಿಯುತ್ತಿದ್ದರು. ಆ ದಿನಗಳಲ್ಲಿ ಬಡ ಮಕ್ಕಳ ಅಭಿವೃದ್ಧಿಗಾಗಿ ನಿಧಿ ಸಂಗ್ರಹಕ್ಕೆ ರಾಣಿ ಎಲಿಜ಼ಬೆತ್-2 ಅವರ ಜನ್ಮದಿನವನ್ನು, ‘ಧ್ವಜ ದಿನಾಚರಣೆ’ಯನ್ನಾಗಿ ಆಚರಿಸುತ್ತಾ ಧನ ಸಂಗ್ರಹಿಸಲಾಗುತ್ತಿತ್ತು. ಆ ಸಂದರ್ಭದಲ್ಲಿ ಕುಲಕರ್ಣಿಯವರ  ಮನಸ್ಸು  ಸಹಜವಾಗಿಯೇ ಭಾರತೀಯ ಮಕ್ಕಳ ಸ್ಥಿತಿಗತಿಯ ಬಗ್ಗೆ ಮಿಡಿದಿತ್ತು.*

*ಇಂತಹದೊಂದು ಯೋಜನೆ ಭಾರತದಲ್ಲೂ ನಡೆಯಬೇಕು; ಮಕ್ಕಳಿಗಾಗಿ ಧನ ಸಂಗ್ರಹಿಸಿ ವಿಶೇಷ ಕಾರ್ಯಕ್ರಮಗಳನ್ನು ನಡೆಸಬೇಕು ಎನ್ನುವ ಬಗ್ಗೆ ವಿಶ್ವಸಂಸ್ಥೆಯಲ್ಲಿ ಪ್ರಸ್ತಾಪವಿಟ್ಟರು. ಇದಕ್ಕೆ ಭಾರತದ ಮೊದಲ ಪ್ರಧಾನಮಂತ್ರಿಯಗಿದ್ದ ಚಾಚಾ ನೆಹರೂ ಅವರ ಜನ್ಮದಿನದಷ್ಟು ಪ್ರಶಸ್ತವಾದ ದಿನ ಬೇರೊಂದಿಲ್ಲ ಎನ್ನುವ ಅಭಿಪ್ರಾಯವನ್ನೂ ಮುಂದಿಟ್ಟರು.*

*ಪಂಡಿತ್ ನೆಹರೂ ಇದಕ್ಕೆ ಒಪ್ಪಿಯಾರೇ? ಎನ್ನುವ ಆತಂಕ ಎಲ್ಲರನ್ನೂ ಕಾಡುತ್ತಿತ್ತು. ಆದರೆ ಚಾಚಾ ನೆಹರೂ ಅವರಿಗೆ ಮಕ್ಕಳ ಮೇಲಿನ ಮಮತೆ ಎಷ್ಟಿತ್ತೆಂದರೆ ಅವರು ಮಕ್ಕಳಿಗಾಗಿ ಏನು ಮಾಡಲೂ ಸಿದ್ಧವಿದ್ದರು. ಮುಜುಗರ ಬದಿಗಿಟ್ಟು ಅತ್ಯಂತ ಸಂತೋಷದಿಂದ ತಮ್ಮ ಜನ್ಮದಿನವನ್ನು ‘ಮಕ್ಕಳ ದಿನಾಚರಣೆ’ಯೆಂದು ಆಚರಿಸಲು ಒಪ್ಪಿಕೊಂಡರು.*

*ಈ ರೀತಿ 1951ರಲ್ಲಿ ನವೆಂಬರ್ 14ರಂದು ಭಾರತದಲ್ಲಿ ‘ಮಕ್ಕಳ ದಿನಾಚರಣೆ’ ಆರಂಭವಾಯಿತು. ಮಕ್ಕಳ ಹಕ್ಕು, ಹಿತರಕ್ಷಣೆ ಮತ್ತು ಯೋಗಕ್ಷೇಮದ ಉದ್ದೇಶದೊಂದಿಗೆ ಜಗತ್ತಿನಾದ್ಯಂತ ಮಕ್ಕಳ ದಿನಾಚರಣೆಯನ್ನು ಬೇರೆ ಬೇರೆ ದಿನಾಂಕಗಳಂದು ಆಚರಿಸುತ್ತಿದ್ದಾರೆ. ನವೆಂಬರ್ 20ರಂದು ‘ಯುನಿವರ್ಸಲ್ ಚಿಲ್ಡ್ರನ್ಸ್ ಡೇ’ ಎಂದಾದರೆ, ಜೂನ್ 1ರಂದು ‘ಇಂಟರ್‌ ನ್ಯಾಷನಲ್‌ ಚಿಲ್ಡ್ರನ್ಸ್ ಡೇ’ ಆಚರಣೆಯಲ್ಲಿದೆ. ಇಂದು ಬಹಳಷ್ಟು ದೇಶಗಳು, ತಮ್ಮ ಮಕ್ಕಳಪ್ರೇಮಿ ರಾಷ್ಟ್ರನಾಯಕರೊಬ್ಬರ ಜನ್ಮದಿನವನ್ನು ‘ಮಕ್ಕಳ ದಿನಾಚರಣೆ’ ರೂಪದಲ್ಲಿ ಆಚರಿಸುತ್ತಿವೆ.*

*ಪ್ರಪಂಚದಲ್ಲಿ ಮಕ್ಕಳ ದಿನ ನವೆಂಬರ್20, ಪ್ರತಿವರ್ಷಆಚರಿಸಲಾಗುತ್ತದೆ. ಆದರೆ, ಭಾರತದಲ್ಲಿ ಮಕ್ಕಳ ದಿನ 14ನೇ ನವೆಂಬರ್ ನಲ್ಲಿ ಆಚರಿಸಲಾಗುತ್ತಿದೆ. ಸ್ವತಂತ್ರ ಭಾರತದ ಮೊದಲ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರೂ ಅವರ ಜನ್ಮ ದಿನಾಚರಣೆ  . ಈ ದಿನವನ್ನು ಮಕ್ಕಳ ದಿನಾಚರಣೆಯಾಗಿ ಆಯ್ದುಕೊಳ್ಳಲು ಕಾರಣ ನೆಹರು ಅವರಿಗೆ ಮಕ್ಕಳ ಬಗೆಗಿನ ಅಪಾರ ಪ್ರೀತಿ ಮತ್ತುಮೋಹ.*

*ಆದುದರಿಂದ ಅವರಿಗೆ ಚಾಚಾ("ಚಾಚಾ" ಚಿಕ್ಕಪ್ಪ, ತಂದೆ ಕಿರಿಯ ಸಹೋದರ ಅರ್ಥ) ಎಂದು ಹೆಸರು ಬಂದಿರುವುದು.*
*ಮಕ್ಕಳದಿನ ವಿಶೇಷವಾಗಿ ಶಾಲಾ ಮಟ್ಟದಲ್ಲಿ,ಭಾರತದಾದ್ಯಂತಆಚರಿಸಲಾಗುತ್ತದೆ. ನೈಜ ಆರ್ಥದೊಂದಿಗೆ ಮಕ್ಕಳ ದಿನಾಚರಣೆಯನ್ನು ಆಚರಿಸಿದರೆ ಆಗ ನಿಜವಾಗಿಯೂ ನೆಹರೂರವರಿಗೆ ನಾವು ಸಲ್ಲಿಸುವ ಗೌರವವು ಸಲ್ಲುತ್ತದೆ.*

*ಅಂದ ಹಾಗೆ ನವೆಂಬರ್ ಇಪ್ಪತ್ತರಂದು ವಿಶ್ವ ಮಕ್ಕಳ ದಿನಾಚರಣೆ. ನಮ್ಮ ಭಾರತದಲ್ಲಿ ಮಾತ್ರ ನವೆಂಬರ್ ಹದಿನಾಲ್ಕು. ಈ ತಿಂಗಳು ಜಗತ್ತಿನ ಎಲ್ಲಾ ಮಕ್ಕಳಿಗೂ ಮಕ್ಕಳಹಬ್ಬದ ಶುಭಾಶಯಗಳು. ಕಲ್ಮಶವರಿಯದ ಮುಗ್ಧ ಮಕ್ಕಳ ನಗು ನಮಗೆಲ್ಲಾ ಚೇತನ. ಈ ನಗು ಮಕ್ಕಳ ಮೊಗದಲ್ಲಿ ಸದಾ ಇರಲಿ.*

Monday, 16 October 2017

🌓ಪಶ್ಚಿಮ ಘಟ್ಟಗಳು
# ಪಶ್ಚಿಮ ಘಟ್ಟಗಳು ಭಾರತದ ಜಂಬೂದ್ವೀಪದ ಪಶ್ಚಿಮ ಭಾಗದಲ್ಲಿರುವ ಒಂದು ಪರ್ವತ ಶ್ರೇಣಿ.
# ಶ್ರೇಣಿಗೆ ಸಹ್ಯಾದ್ರಿ ಪರ್ವತಗಳು ಎಂಬ ಹೆಸರು ಸಹ ಇದೆ.
# ದಖ್ಖನ್ ಪೀಠಭೂಮಿಯಞ ಪಶ್ಚಿಮದ ಅಂಚಿನ ಉದ್ದಕ್ಕೂ ಹಬ್ಬಿರುವ ಪಶ್ಚಿಮ ಘಟ್ಟಗಳು ಪೀಠಭೂಮಿಯನ್ನು ಅರಬ್ಬೀ ಸಮುದ್ರದ ಕಿರಿದಾದ ಕರಾವಳಿ ಪ್ರದೇಶದಿಂದ ಬೇರ್ಪಡಿಸುತ್ತವೆ.
# ಮಹಾರಾಷ್ಟ್ರ -
ಗುಜರಾತ್ ಗಳ ಗಡಿಪ್ರದೇಶದಲ್ಲಿ ತಾಪ್ತಿ ನದಿಯ ದಕ್ಷಿಣದಲ್ಲಿ ಆರಂಭವಾಗುವ ಶ್ರೇಣಿಯು ದಕ್ಷಿಣಾಭಿಮುಖವಾಗಿ ಹಬ್ಬಿ
ಕನ್ಯಾಕುಮಾರಿಯವರೆಗೆ ಇರುವುದು.
# ಒಟ್ಟು ಸುಮಾರು ೧೬೦೦ ಕಿ.ಮೀ. ಉದ್ದವಿರುವ ಪಶ್ಚಿಮ ಘಟ್ಟಗಳು ಮಹಾರಾಷ್ಟ್ರ, ಗೋವಾ , ಕರ್ನಾಟಕ ,
ಕೇರಳ ಮತ್ತು ತಮಿಳುನಾಡಿನಲ್ಲಿ ಹಬ್ಬಿವೆ.
#
ಒಟ್ಟು ಶ್ರೇಣಿಯ ಅರ್ಧಕ್ಕಿಂತ ಹೆಚ್ಚು ಭಾಗವು ಕರ್ಣಾಟಕದಲ್ಲಿಯೇ ಇದೆ.
# ಪಶ್ಚಿಮ ಘಟ್ಟಗಳು ಒಟ್ಟು ೬೦೦೦೦ ಚದರ ಕಿ.ಮೀ. ಪ್ರದೇಶವನ್ನು ಆವರಿಸಿದ್ದು ಅತಿ ಸಂಕೀರ್ಣ ನದಿ ವ್ಯವಸ್ಥೆಗೆ ಮೂಲವಾಗಿವೆ. ಇಲ್ಲಿಂದ ಹೊರಡುವ ನದಿಗಳು ಭಾರತದ ಒಟ್ಟು ಜಲಾನಯನ ಪ್ರದೇಶದ ೪೦% ಭಾಗವನ್ನು ಆವರಿಸಿವೆ.
# ಪಶ್ಚಿಮ ಘಟ್ಟಗಳ ಸರಾಸರಿ ಎತ್ತರ ಸುಮಾರು ೧೨೦೦ ಮೀಟರ್.
# ಪ್ರದೇಶವು ವಿಶ್ವದ ಅತ್ಯಂತ ಸಕ್ರಿಯ ಜೀವವೈವಿಧ್ಯದ ನೆಲೆಗಳಲ್ಲಿ ಒಂದಾಗಿದ್ದು ೫೦೦೦ಕ್ಕೂ ಹೆಚ್ಚಿನ ತಳಿಯ ಗಿಡಮರಗಳು, ೧೩೯ ಬಗೆಯ
ಸಸ್ತನಿಗಳು , ೫೦೮ ಪ್ರಭೇದದ ಪಕ್ಷಿಗಳು ಮತ್ತು ೧೭೯ ಪ್ರಕಾರದ ದ್ವಿಚರಿಗಳಿಗೆ ನೆಲೆಯಾಗಿವೆ.
# ವಿಶ್ವದಲ್ಲಿ ಅಳಿವಿನಂಚಿನಲ್ಲಿರುವ ಜೀವತಳಿಗಳ ಪೈಕಿ ೩೨೫ ತಳಿಗಳ ಜೀವಿಗಳು ಪಶ್ಚಿಮ ಘಟ್ಟಗಳಲ್ಲಿ ನೆಲೆಸಿವೆ.







ಕವಿ/ಸಾಹಿತಿಯ ಹೆಸರು - ಕಾವ್ಯನಾಮ
1. ಅಜ್ಜಂಪುರ ಸೀತಾರಾಂ - ಆನಂದ
2. ಅರಕಲಗೂಡು ನರಸಿಂಗರಾವ್ ಕೃಷ್ಣರಾವ್ - ..ಕೃ
3. ಅರಗದ ಲಕ್ಷ್ಮಣರಾವ್ - ಹೊಯ್ಸಳ
4. ಅಕ್ಕಿಹೆಬ್ಬಾಳು ರಾಮಣ್ಣ ಮಿತ್ರ - .ರಾ.ಮಿತ್ರ
5. ಆದ್ಯರಂಗಾಚಾರ್ಯ - ಶ್ರೀರಂಗ
6. ಕಿಕ್ಕೇರಿ ಸುಬ್ಬರಾವ್ ನರಸಿಂಹಸ್ವಾಮಿ - ಕೆ.ಎಸ್.ಎನ್
7. ಕೆ.ವಿ.ಪುಟ್ಟಪ್ಪ - ಕುವೆಂಪು
8. ಕುಂಬಾರ ವೀರಭದ್ರಪ್ಪ - ಕುಂವೀ
9. ಕಯ್ಯಾರ ಕಿಞ್ಞಣ್ಣರೈ - ದುರ್ಗಾದಾಸ
10. ಕಸ್ತೂರಿ ರಘುನಾಥಚಾರ ರಂಗಾಚಾರ - ರಘುಸುತ
11. ಕುಳಕುಂದ ಶಿವರಾಯ - ನಿರಂಜನ
12. ಕೆ.ಪಿ.ಪೂರ್ಣಚಂದ್ರ ತೇಜಸ್ವಿ - ಪೂಚಂತೇ
13. ಗುಗ್ಗರಿ ಶಾಂತವೀರಪ್ಪ ಶಿವರುದ್ರಪ್ಪ - ಜಿ ಎಸ್ ಎಸ್
14. ಗೋವಿಂದಾಚಾರ್ಯ ಭೀಮಾಚಾರ್ಯ ಜೋಷಿ - ಜಡಭರತ
15. ಚನ್ನಮಲ್ಲಪ್ಪ ಸಿದ್ಧಲಿಂಗಪ್ಪ ಗಲಗಲಿ - ಮಧುರಚೆನ್ನ
16. ಚಂದ್ರಶೇಖರ ಪಾಟೀಲ - ಚಂಪಾ
17. ಜಾನಕಿ ಶ್ರೀನಿವಾಸ ಮೂರ್ತಿ - ವೈದೇಹಿ
18. ತಳುಕಿನ ರಾಮಾಸ್ವಾಮಿ ಸುಬ್ಬರಾವ್ - .ರಾ.ಸು.
19. ತಿರುಮಲೆ ರಾಜಮ್ಮ - ಭಾರತಿ
20. ತೀರ್ಥಪುರ ನಂಜುಂಡಯ್ಯ ಶ್ರೀಕಂಠಯ್ಯ - ತೀನಂಶ್ರೀ
21. .ರಾ.ಬೇಂದ್ರೆ - ಅಂಬಿಕಾತನಯದತ್ತ
22. ದೇವನಹಳ್ಳಿ ವೆಂಕಟರಮಣಯ್ಯ ಗುಂಡಡಪ್ಪ - ಡಿವಿಜಿ
23. ದೇ.ಜವರೇಗೌಡ - ದೇಜಗೌ
24. ದೊಡ್ಡರಂಗೇಗೌಡ - ಮನುಜ
25. ದೇವುಡು ನರಸಿಂಹ ಶಾಸ್ತ್ರಿ - ಕುಮಾರ ಕಾಳಿದಾಸ
26. ನಂದಳಿಕೆ ಲಕ್ಷ್ಮೀನಾರಾಯಣ - ಮುದ್ದಣ
27. ಪಾಟೀಲ ಪುಟ್ಟಪ್ಪ - ಪಾಪು
28. ಪಂಜೆ ಮಂಗೇಶರಾಯ - ಕವಿಶಿಷ್ಯ
29. ಪುರೋಹಿತ ತಿರುನಾರಾಯಣ ನರಸಿಂಗರಾವ್ - ಪುತಿನ
30. ರಾಯಸಂ ಭಿಮಸೇನರಾವ್ - ಬೀಚಿ
31. ಬಾಳಾಚಾರ್ಯ ಗೊಪಾಲಚಾರ್ಯ ಸಕ್ಕರಿ - ಶಾಂತಕವಿ
32. ಬೆಳ್ಳೂರು ಮೈಲಾರಯ್ಯ ಶ್ರೀಕಂಠಯ್ಯ - ಬಿಎಂಶ್ರೀ
33. ಬೆಟಗೇರಿ ಕೃಷ್ಣಶರ್ಮ - ಆನಂದಕಂದ
34. ಅಂಬಳ ರಾಮಕೃಷ್ಣಶಾಸ್ತ್ರಿ - ಶ್ರೀಪತಿ
35. .ಆರ್.ಕೃಷ್ಣಶಾಸ್ತ್ರಿ - .ಆರ್.ಕೃ
36. ಮಾಸ್ತಿ ವೆಂಕಟೇಶ ಅಯ್ಯಂಗಾರ್ - ಶ್ರೀನಿವಾಸ
37. ರಾಮೇಗೌಡ - ರಾಗೌ
38. ವಿನಾಯಕ ಕೃಷ್ಣ ಗೋಕಾಕ್ - ವಿನಾಯಕ
39. ವೆಂಕಟೇಶ ತಿರುಕೊ ಕುಲಕರ್ಣಿ - ಗಳಗನಾಥ
40. ಸಿದ್ದಯ್ಯಪುರಾಣಿಕ - ಕಾವ್ಯಾನಂದ
41. ಎಂ.ಆರ್.ಶ್ರೀನಿವಾಸಮೂರ್ತಿ - ಎಂ.ಆರ್.ಶ್ರೀ
42. ಸಿ.ಪಿ.ಕೃಷ್ಣಕುಮಾರ್ - ಸಿ.ಪಿ.ಕೆ
43. ಎಚ್.ಎಸ್.ಅನುಸೂಯ - ತ್ರಿವೇಣಿ


🌕 ಕೋಲ್ಕತಾ ಬಂದರು (ಹಲ್ದಿಯಾ ಸೇರಿದಂತೆ):
Kolkata Port (including Haldia)
ಕೋಲ್ಕತಾದ ಬಂಗಾಳ ಕೊಲ್ಲಿಯಿಂದ 128 ಕಿ.ಮೀ, ದೂರದಲ್ಲಿರುವ ಹೂಗ್ಲಿ ನದಿಯ ತೀರದಲ್ಲಿದೆ. ಇದು ಒಂದು ನದಿ ತೀರದ ಬಂದರಾಗಿದೆ.*ಕೋಲ್ಕತ್ತಾ ಬಂದರನ್ನು ಭಾರತದ ಚಹದ ಬಂದರು ಎಂದು ಕರೆಯಲಾಗುತ್ತಿದೆ.
🌕 ಹಾಲ್ಡಿಯಾ ಬಂದರು (Haldia):
ಕೊಲ್ಕತ್ತಾ ಬಂದರಿನ ಒತ್ತಡ ಕಡಿಮೆ ಮಾಡಲು ನಿರ್ಮಿಸಿರುವ ಕೃತಕ ಬಂದರಾಗಿದೆ. ಕೋಲ್ಕತಾ ಬಂದರಿನ ವಿಪರೀತ ಹೂಳು ತುಂಬುವಿಕೆಯಿಂದಾಗುತ್ತಿದ್ದ  ದೊಡ್ಡ ಹಡಗುಗಳು ಪ್ರವೇಶ ತಡೆಯನ್ನು ನಿವಾರಿಸಲು ಹಲ್ದಿಯಾ ಬಂದರನ್ನು ಅಭಿವೃದ್ಧಿಪಡಿಸಲಾಯಿತು.
🌕 ಪಾರದೀಪ್ ಬಂದರು: (Paradip Port)
ಒರಿಸ್ಸಾದ ಬಂಗಾಳ ಕೊಲ್ಲಿಯ ತೀರದಲ್ಲಿದೆ. ಭಾರತವು ಇಲ್ಲಿಂದ ಜಪಾನ್ ಗೆ ಕಚ್ಚಾ ಕಬ್ಬಿಣವನ್ನು ರಫ್ತು ಮಾಡುತ್ತದೆ.
🌕ವಿಶಾಖಪಟ್ಟಣಂ ಬಂದರು: (Vishakhapatnam Port)
ಇದು ಅತ್ಯಂತ ಆಳವಾದ ಬಂದರಾಗಿದ್ದು, ಆಂಧ್ರಪ್ರದೇಶದಲ್ಲಿದೆಇದು ಭಿಲಾಯಿ ಮತ್ತು ರೂರ್ಕೆಲಾ ಪ್ರದೇಶಗಳ ಉಕ್ಕು ಉತ್ಪಾದನೆಗೆ ಸಂಬಂಧಿಸಿದಂತೆ ಕಾರ್ಯನಿರ್ವಹಿಸುತ್ತದೆ.
🌕 ಚೆನೈ ಬಂದರು: (Chennai Port)
ಹಳೆಯ ಕೃತಕ ಬಂದರು. ಬಂದರು ದಟ್ಟಣೆಯನ್ನು ನಿರ್ವಹಿಸುವ ಸಾಮರ್ಥ್ಯದ ವಿಷಯದಲ್ಲಿ ಎರಡನೇ ಮುಂಬೈ ನಂತರ ಸ್ಥಾನದಲ್ಲಿದೆ.
🌕ಎನ್ನೋರ್ ಬಂದರು: (Ennore Port)
ಇದನ್ನು 2001ರಲ್ಲಿ ಪ್ರಮುಖ ಬಂದರು ಎಂದು ಘೋಷಿಸಲಾಯಿತುಇದು ಖಾಸಗಿ (ಕಾರ್ಪೊರೇಟ್) ಸಹಭಾಗಿತ್ವದಲ್ಲಿರುವ ಮೊದಲ ಬಂದರಾಗಿದೆ. ಉಷ್ಣ ಸ್ಥಾವರಕ್ಕೆ ಬೇಕಾದ ಕಲ್ಲಿದ್ದಲನ್ನು ತಮಿಳುನಾಡು ವಿದ್ಯುಚ್ಛಕ್ತಿ ಮಂಡಳಿ ಪವರ್ ಸ್ಟೇಷನ್ ಗೆ ಪೂರೈಸಲು ಬಂದರನ್ನು ಎಲ್ಲಾ ರೀತಿಯಿಂದ ಸುಸಜ್ಜಿತ ಆಧುನೀಕರಣಗೊಳಿಸಲಾಗಿದೆ.
🌕 ಟುಟಿಕೊರಿನ್ ಬಂದರು
(Tuticorin Port)
ಪಾಂಡ್ಯ ರಾಜರ ಆಳ್ವಿಕೆಯಲ್ಲಿ ಅಸ್ತಿತ್ವಕ್ಕೆ ಬಂದಿತು. ಇದು ಕೃತಕ ಆಳವಾದ ಸಮುದ್ರದ ಬಂದರನ್ನು ಹೊಂದಿದೆ.
🌕 ಕೊಚ್ಚಿನ್ ಬಂದರು:(Cochin Port)
ಇದು ಕೇರಳ ಕರಾವಳಿಯಲ್ಲಿರುವ ಉತ್ತಮವಾದ ನೈಸರ್ಗಿಕ ಬಂದರು. ಚಹಾ, ಕಾಫಿ ಮತ್ತು ಮೆಣಸು ಪದಾರ್ಥಗಳ ರಫ್ತು ಹಾಗು ಪೆಟ್ರೋಲಿಯಂ ಮತ್ತು ರಸ ಗೊಬ್ಬರಗಳ ಆಮದನ್ನು ನಿಭಾಯಿಸುತ್ತದೆ.
🌕 ನವ ಮಂಗಳೂರು ಬಂದರು:(New Mangalore Port)
ಇದನ್ನು 'ಕರ್ನಾಟಕದ ದ್ವಾರ' ಎಂದು ಕರೆಯುತ್ತಾರೆ. ಕುದುರೆಮುಖದಲ್ಲಿ ತೆಗೆಯುವ ಕಬ್ಬಿಣದ ಅದಿರಿನ ರಫ್ತು ನಿಭಾಯಿಸುತ್ತದೆ.
🌕 ಮರ್ಮಗೋವಾ ಬಂದರು: (Marmugao Port)
ಮರ್ಮಗೋವಾ ಬಂದರು ಗೋವಾ ರಾಜ್ಯದ ಝವಾರಿ ಕೊಲ್ಲಿಯ ಪ್ರದೇಶದಲ್ಲಿದೆ. ಇದು ನೌಕಾ ನೆಲೆಯನ್ನು ಹೊಂದಿದ್ದು, ಭಾರತದ ಪ್ರಮುಖ ಕಬ್ಬಿಣದ ಅದಿರಿನ ರಫ್ತಿಗೆ ಹೆಸರಾದ ಬಂದರಾಗಿದೆ.
🌕 ಮುಂಬೈ ಬಂದರು (Mumbai Port):
ಇದು ಒಂದು ನೈಸರ್ಗಿಕ ಬಂದರು. ಭಾರತದ ಹೊಸ ಅತಿ ಜನನಿಬಿಡ ಬಂದರಾಗಿದೆ.
🌕ನವಸೇವಾ ಬಂದರು (Nhava Sheva) : ಇದನ್ನು ಮುಂಬೈ ಬಂದರು ಬಳಿ ಅಭಿವೃದ್ಧಿಪಡಿಸಲಾಗುತ್ತಿದೆ.Mumbai ಬಂದರಿನ ಒತ್ತಡವನ್ನು ತಗ್ಗಿಸುವ ಉದ್ದೇಶದಿಂದ ನವಶೇವಾ ಬಂದರನ್ನು ನಿರ್ಮಿಸಲಾಗಿದೆ.
🌕ಜವಾಹರಲಾಲ್ ನೆಹರು ಬಂದರು: (Jawaharlal Nehru Port)
ವಿಶ್ವದ ವೇಗವಾಗಿ ಬೆಳೆಯುತ್ತಿರುವ ಬಂದರುಗಳಲ್ಲಿ ಇದು 5 ಸ್ಥಾನದಲ್ಲಿದೆ.
🌕ಕಾಂಡ್ಲಾ ಬಂದರು: (Kandla Port)
ಇದನ್ನು ಕರಾಚಿ ಬಂದರಿನ ವಿಭಜನೆಯ ನಂತರ ಪರ್ಯಾಯವಾಗಿ  ಅಭಿವೃದ್ಧಿಪಡಿಸಲಾಯಿತು ಇದು ಒಂದು ಉಬ್ಬರವಿಳಿತದ ಬಂದರಾಗಿದ್ದು, ಮುಕ್ತ ವ್ಯಾಪಾರ ವಲಯವಾಗಿದೆ. ಇದು ಕಛ್ ಖಾರಿಯ ರಣ್ ಪ್ರದೇಶದ ಶಿರೋಭಾಗದಲ್ಲಿದೆ.









*🌗ಭಾರತದ ರಾಜಕೀಯ ಪಕ್ಷಗಳು :*
✴️ಅಖಿಲ ಭಾರತ ಕಾಂಗ್ರೇಸ್ ಪಕ್ಷ :
        1885
ರಲ್ಲಿ  ಸ್ಥಾಪನೆಯಾಯಿತು.ಭಾರತದ ಹಳೆಯದಾದ ಪಕ್ಷಗಳಲ್ಲಿ ಒಂದಾಗಿದೆ.ಇದು ದೇಶದಲ್ಲಿ ಅತೀ ಹೆಚ್ಚು ಆಡಳಿತ ನಡೆಸಿದ ಪಕ್ಷವಾಗಿದೆ.
✴️ಭಾರತೀಯ ಜನತಾ ಪಕ್ಷ :
      1980
ರಲ್ಲಿ ಸ್ಥಾಪನೆಯಾಯಿತು.ಹಿಂದುತ್ವ , ಹಿಂದೂ ರಾಷ್ಟ್ರೀಯತೆ ಜೊತೆ ಗುರುತಿಸಿಕೊಂಡಿದೆ.ಔದರ ಸ್ಥಾಪಕರು ಅಟಲೊ ಬಿಹಾರಿ ವೋಜಪೇಯಿ & ಶ್ಯಾಮ್ ಪ್ರಸಾದ್ ಮುಖಜಿ೯.
✴️ಜನತಾ ದಳ ಪಕ್ಷ :
        1989
ರಲ್ಲಿ ವಿ.ಪಿ.ಸಿಂಗ್ ನೇತೃತ್ವದಲ್ಲಿ ಸ್ಥಾಪನೆಯಾಯಿತು.ಜಯಪ್ರಕಾಶ್ ನಾರಾಯಣರ ಸಿದ್ಧಾಂತಗಳನ್ನು ಅಳವಡಿಸಿಕೊಂಡಿದೆ.
✴️ಕಮ್ಯೂನಿಸ್ಟ್ ಪಾಟಿ೯ ಆಫ್ ಇಂಡಿಯಾ :
      1920
ರಲ್ಲಿ ಎಂ.ಎನ್.ರಾಯ್ ರಿಂದ ಸ್ಥಾಪನೆ.ಕಾಮಿ೯ಕ ಮತ್ತು ದುಡಿಯುವ ವಗ೯ದವರ ಹಿತಾಸಕ್ತಿ ಕಾಪಾಡುವುದಕ್ಕಾಗಿ ಪಕ್ಷ ಸ್ಥಾಪನೆಯಾಯಿತು.
✴️ಕಮ್ಯೂನಿಸ್ಟ್ ಪಾಟಿ೯ ಆಫ್ ಇಂಡಿಯಾ (ಮಾಕ್ವಿ೯ಸ್ಟ್ ):
       
ಸಿಪಿಎ ಪಕ್ಷದಿಂದ ಪ್ರತ್ಯೇಕಗೊಂಡು 1964 ರಲ್ಲಿ ಸ್ಥಾಪನೆಯಾಯಿತು.ಇದು ಕೂಡ ಕಾಮಿ೯ಕರು , ರೈತರು ಹಾಗೂ ಹಿಂದುಳಿದ ವಗ೯ದವರ ಹಿತಾಸಕ್ತಿಗೆ ಹೋರಾಡುವ ಪಕ್ಷವಾಗಿದೆ.
✴️ರಾಷ್ಟ್ರೀಯ ಜನತಾ ದಳ :
       
ಜನತಾದಳದಲ್ಲಿನ ಭಿನ್ನಾಭಿಪ್ರಾಯದಿಂದಾಗಿ ಲಾಲೂ ಪ್ರಸಾದ್ ಯಾದವ್ 1997 ರಲ್ಲಿ ಪಕ್ಷವನ್ನು ಸ್ಥಾಪಿಸಿದರು.
✴️ಸಮಾಜವಾದಿ ಪಾಟಿ೯  :
       
ಜನತಾದಳ ಎಸ್ ಮತ್ತು ಜನತಾ ಪಕ್ಷ ಕೂಡಿಕೊಂಡು 1992ರಲ್ಲಿ ಸ್ಥಾಪನೆಯಾಯಿತು. ಇದರ ಸ್ಥಾಪಕರು ಮುಲಾಯಂ ಸಿಂಗ್ ಯಾದವ್ ರವರು.
✴️ಬಹುಜನ ಸಮಾಜವಾದಿ ಪಾಟಿ೯ :
         1984
ರಲ್ಲಿ ಕಾನ್ಶಿರಾಂ ಇದನ್ನು ಸ್ಥಾಪಿಸಿದರು. ಇದು ಅನುಸೂಚಿತ ಜಾತಿ ,ಅನುಸೂಚಿತ ಪಂಗಡದವರ ಹಿತವನ್ನು ಕಾಪಾಡುವುದಕ್ಕಾಗಿ ಹೋರಾಟ ಮಾಡುತ್ತದೆ .
✴️ಆಲ್ ಇಂಡಿಯಾ ತೃಣಮೂಲ ಕಾಂಗ್ರೇಸ್ :
       
ಕಾಂಗ್ರೇಸ್ ಪಕ್ಷದಲ್ಲಿನ ಭಿನ್ನಾಭಿಪ್ರಾಯದಿಂದಾಗಿ 1998ರಲ್ಲಿ ಮಮತಾ ಬ್ಯಾನಜಿ೯ ಪಕ್ಷವನ್ನು ಸ್ಥಾಪಿಸಿದರು.
ನ್ಯಾಷನಲಿಸ್ಟ್ ಕಾಂಗ್ರೇಸ್ ಪಾಟಿ೯ :
     
ಕಾಂಗ್ರೇಸ್ ಪಕ್ಷದ ಭಿನ್ನಾಭಿಪ್ರಾಯದಿಂದಾಗಿ 1999ರಲ್ಲಿ ಶರದ್ ಪವಾರ್, ಪಿ..ಸಂಗ್ಮಾ ಮತ್ತು ತಾರೀಕ್ ಅನ್ವರ್ ಕೂಡಿಕೊಂಡು ಸ್ಥಾಪನೆ ಮಾಡಿದರು.
✴️ಅಕಾಲಿದಳ ಪಕ್ಷ :
     
ಪಂಜಾಬ್ ಪ್ರಮುಖ ಪಕ್ಷವಾಗಿದೆ.1920ರಲ್ಲಿ ಸಿಖ್ಖರ ಹೌತಾಸಕ್ತಿ ಕಾಪಾಡುವುದಕ್ಕಾಗಿ ಸ್ಥಾಪನಗಯಾಯಿತು.
✴️ಆಲ್ ಇಂಡಿಯಾ ಫಾವ೯ಡ್೯ ಬ್ಲಾಕ್ :
        1940
ರಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ಇದನ್ನು  ಸ್ಥಾಪಿಸಿದರು.ಸಮಾಜವಾದ ರಾಷ್ಟ್ರ ಕಟ್ಟುವುದು ಇದರ ಉದ್ದೇಶವಾಗಿದೆ.
ಅಸ್ಸಾಂ ಗಣ ಪರಿಷತ್ತು :
        1985
ರಲ್ಲಿ ಪ್ರಫುಲ್ ಕುಮಾರ್ ಮಹಾಂತ ಇದನ್ನು ಸ್ಥಾಪಿಸಿದರು.ಇದು ಅಸ್ಸಾಂನ ಪ್ರಮುಖ ಪಕ್ಷವಾಗಿದೆ.
ತೆಲುಗು ದೇಶಂ :
          1982
ರಲ್ಲಿ ಎನ್.ಟಿ.ರಾಮರಾವ್ ಆಂಧ್ರಪ್ರದೇಶದಲ್ಲಿ ಸ್ಥಾಪನೆ ಮಾಡಿದರು.ಇದು ಬಡತನ ಮತ್ತು ಸಾಮಾಜಿಕ ಅಸಮಾನತೆ ಹೋಗಲಾಡಿಸುವ ಉದ್ದೇಶ ಹೊಂದಿದೆ.






*
ಪ್ರಪಂಚದ ದೇಶಗಳು ಮತ್ತು ರಾಜಧಾನಿ:*
1.
ಅಫ್ಘಾನಿಸ್ತಾನ -ಕಾಬೂಲ್.
2.
ಅಕ್ರೋತಿರಿ ಮತ್ತು ಧೆಕೆಲಿಯಾ- ಎಪಿಸ್ಕೋಪಿ ಕಂಟೋನ್ಮೆಂಟ್.
3.
ಅಲ್ಬೇನಿಯಾ -ಟಿರಾನಾ.
4.
ಅಲ್ಜೀರಿಯಾ -ಅಲ್ಜೀರಿಸ್.
5.
ಅಮೇರಿಕನ್ ಸಮೋವಾ ಪಾಗೋ- ಪಾಗೋ.
6.
ಅಂಡೋರಾ- ಅಂಡೋರಾ ಲಾ ವೆಲ್ಲಾ.
7.
ಅಂಗೋಲಾ- ಲುಆಂಡಾ.
8.
ಆಂಗ್ವಿಲಾ- ದಿ ವ್ಯಾಲ್ಲಿ.
9.
ಆಂಟಿಗುವಾ ಮತ್ತು ಬಾರ್ಬಡಾ -ಸೇಂಟ್ ಜಾನ್ಸ್.
10.
ಅರ್ಜೆಂಟೀನಾ- ಬ್ಯುನೋಸ್ ಐರಿಸ್.
11.
ಅರ್ಮೇನಿಯಾ- ಯೆರೆವಾನ್.
12.
ಅರುಬಾ ಓರನ್- ಜೆಸ್ತಾದ್.
13.
ಆಸ್ಟ್ರೇಲಿಯಾ -ಕ್ಯಾನ್ಬೆರಾ.
14.
ಆಸ್ಟ್ರಿಯಾ- ವಿಯೆನ್ನಾ.
15.
ಅಝರ್ಬೆಜಾನ್- ಬಾಕು.
16.
ಬಹಾಮಾಸ್- ನಾಸ್ಸಾಉ.
17.
ಬಹ್ರೇನ್ -ಮನಾಮಾ.
18.
ಬಾಂಗ್ಲಾದೇಶ್ -ಢಾಕಾ.
19.
ಬಾರ್ಬಡೋಸ್ -ಬ್ರಿಡ್ಜಟೌನ್.
20.
ಬೆಲಾರೂಸ್ ಮಿನ್ಸ್ಕ್.
21.
ಬೆಲ್ಜಿಯಮ್- ಬ್ರುಸ್ಸೆಲ್ಸ್.
22.
ಬೆಲಿಝ್ -ಬೆಲ್ಮೊಪಾನ್.
23.
ಬೆನಿನ್ ಪೊರ್ಟೋ-ನೋವೋ.
24.
ಬರ್ಮುಡಾ -ಹ್ಯಾಮಿಲ್ಟನ್.
25.
ಭೂತಾನ್ -ಥಿಂಪು.
26.
ಬೊಲಿವಿಯಾ -ಸುಕ್ರೆ / ಲಾ ಪಾಝ್
27.
ಬೋಸ್ನಿಯಾ ಮತ್ತು ಹರ್ಝೆಗೋವಿನಾ- ಸರಜೆವೋ.
28.
ಬೋಟ್ಸ್ವಾನಾ -ಗೆಬರೋನ್.
29.
ಬ್ರಾಝಿಲ್ -ಬ್ರಾಸಿಲಿಯಾ.
30.
ಬ್ರಿಟಿಷ್ ವರ್ಜಿನ್ ಐಲ್ಯಾಂಡ್ಸ್- ರೋಡ್ ಟೌನ್.
31.
ಬ್ರುನಿ ಬಂದಾರ್ ಸೇರಿ -ಬೇಗವಾನ್.
32.
ಬಲ್ಗೇರಿಯಾ -ಸೋಫಿಯಾ.
33.
ಬರ್ಕಿನಾ ಫಾಸೋ- ಉಆಗಡೌಗು.
34.
ಬುರುಂಡಿ- ಬುಜುಂಬುರಾ.
35.
ಕಾಂಬೋಡಿಯಾ- ಫೆನೋಮ್ ಪೆನ್.
36.
ಕ್ಯಾಮರೂನ್- ಯಾಂಡೇ .
37.
ಕೆನಡಾ -ಒಟ್ಟಾವಾ.
38.
ಕೇಪ್ ವರ್ಡ್- ಪ್ರೈಯಾ .
39.
ಕೇಮನ್ ಐಲ್ಯಾಂಡ್ಸ್ -ಜಾರ್ಜ್ ಟೌನ್.
40.
ಸೆಂಟ್ರಲ್ ಆಫ್ರಿಕನ್ ರಿಪಬ್ಲಿಕ್- ಬಾಂಗೈ.
41.
ಚಾಡ್ ಎನ್ ’ -ಜಮೇನಾ .
42.
ಚಿಲಿ -ಸ್ಯಾಂಟಿಯಾಗೋ.
43.
ಕ್ರಿಸ್ ಮಸ್ ಐಲ್ಯಾಂಡ್- ಫ್ಲಾಯಿಂಗ್ ಫಿಶ್ ಕೋವ್.
44.
ಕೊಕೋಸ್ ಐಲ್ಯಾಂಡ್ - ವೆಸ್ಟ್ ಐಲ್ಯಾಂಡ್.
45.
ಕೊಲಂಬಿಯ- ಬೊಗೊಟಾ.
46.
ಕೊಮೊರೋಸ್- ಮೊರೊನಿ.
47.
ಕುಕ್ ಐಲ್ಯಾಂಡ್ಸ್- ಅವರುಆ.
48.
ಕೋಸ್ಟಾ ರಿಕಾ- ಸ್ಯಾನ್ ಜೋಸ್.
49.
ಕ್ರೊಯೇಷಿಯಾ- ಝಾಗ್ರೇಬ್.
50.
ಕ್ಯೂಬಾ- ಹವಾನಾ.
51.
ಸಿಪ್ರಸ್- ನಿಕೋಸೊಯಾ.
52.
ಝೆಕ್ ಗಣರಾಜ್ಯ -ಪ್ರೇಗ್.
53.
ಕೋಟ್ ಡೆ ಐವರಿ- ಯಾಮೊಸೊಕ್ರೋ.
54.
ಕಾಂಗೋ ಪ್ರಜಾ ಗಣರಾಜ್ಯ -ಕಿನ್ಸ್ಹಾಸಾ.
55.
ಡೆನ್ಮಾರ್ಕ್ -ಕೋಪನ್ ಹೇಗನ್.
56.
ಜಿಬೌತಿ -ಜಿಬೌತಿ.
57.
ಡೊಮಿನಿಕಾ -ರೊಸ್ಯು.
58.
ಡೊಮಿನಿಕಾ ಗಣರಾಜ್ಯ-ಸ್ಯಾಂಟೋ ಡೊಮಿಂಗೋ.
59.
ಪೂರ್ವ ತಿಮೋರ್ -ಡಿಲಿ.
60.
ಇಕ್ವೆಡಾರ್- ಕ್ವಿಟೋ.
61.
ಈಜಿಪ್ಟ್ -ಕೈರೋ.
62.
ಎಲ್ ಸಾಲ್ವಡೋರ್- ಸಾನ್ ಸಾಲ್ವಡೋರ್.
63.
ಎಕ್ವೆಟೋರಿಯಲ್ ಗಿನಿಯಾ - ಮಲಬೊ.
64.
ಎರಿತ್ರಿಯಾ -ಅಸ್ಮಾರಾ.
65.
ಎಸ್ಟೋನಿಯಾ- ಟಾಲಿನ್.
66.
ಇಥಿಯೋಪಿಯಾ- ಆಡಿಸ್ ಅಬಾಬಾ.
67.
ಫಾಲ್ಕಲ್ಯಾಂಡ್ ದ್ವೀಪಗಳು- ಸ್ಟ್ಯಾನ್ಲಿ.
68.
ಫೆರೋ ದ್ವೀಪಗಳು -ಟೋರ್ಶ್ವಾನ್.
69.
ಫೆಡರೇಟೆಡ್ ಸ್ಟೇಟ್ಸ್ ಆಫ್ ಮೈಕ್ರೋನೇಷಿಯಾ - ಪಾಲಿಕಿರ್.
70.
ಫಿಜಿ -ಸುವಾ.
71.
ಫಿನ್ ಲ್ಯಾಂಡ್- ಹೆಲ್ಸಿಂಕಿ.
72.
ಫ್ರಾನ್ಸ್- ಪ್ಯಾರಿಸ್.
73.
ಫ್ರೆಂಚ್ ಪಾಲಿನೇಷಿಯಾ- ಪಪೆಟ.
74.
ಗಬೊನ್-ಲಿಬ್ರವಿಲ್ಲೆ.
75.
ಗಾಂಬಿಯಾ- ಬಂಜುಲ್.
76.
ಜಾರ್ಜಿಯಾ- ಬಿಲಿಸಿ.
77.
ಜರ್ಮನಿ -ಬರ್ಲಿನ್.
78.
ಘಾನಾ- ಆಕ್ರಾ .
79.
ಜಿಬ್ರಾಲ್ಟರ್- ಜಿಬ್ರಾಲ್ಟರ್.
80.
ಗ್ರೀಸ್- ಅಥೆನ್ಸ್.
81.
ಗ್ರೀನ್ ಲ್ಯಾಂಡ್ -ನೂಕ್.
82.
ಗ್ರೆನಾಡಾ -ಸೇಂಟ್ ಜಾರ್ಜ್.
83.
ಗ್ವಾಮ್ -ಹಗತ್ನಾ.
84.
ಗ್ವಾಟೆಮಾಲಾ -ಗ್ವಾಟೆಮಾಲಾ ನಗರ.
85.
ಗೆರ್ನ್ಸೆ -ಸೇಂಟ್ ಪೀಟರ್ ಪೋರ್ಟ್.
86.
ಗಿನಿಯಾ- ಕೊನಾಕ್ರಿ.
87.
ಗಿನಿಯಾ- ಬಿಸಾಉ ಬಿಸಾಉ.
88.
ಗಯಾನಾ- ಜಾರ್ಜ್ ಟೌನ್.
89.
ಹೈಟಿ ಪೋರ್ಟ್- ಪ್ರಿನ್ಸ್.
90.
ಹೊಂಡುರಾಸ್- ತೆಗುಸಿಗಲ್ಪಾ.
91.
ಹಂಗರಿ- ಬುಡಾಪೆಸ್ಟ್.
92.
ಐಸ್ ಲ್ಯಾಂಡ್ -ರೆಯ್ಕಜಾವಿಕ್.
93.
ಭಾರತ -ನವದೆಹಲಿ.
94.
ಇಂಡೋನೇಷಿಯಾ -ಜಕಾರ್ತಾ.
95.
ಇರಾನ್- ತೆಹರಾನ್.
96.
ಇರಾಕ್ -ಬಾಗ್ದಾದ್.
97.
ಐರ್ ಲ್ಯಾಂಡ್- ಡಬ್ಲಿನ್.
98.
ಐಲ್ ಆಫ್ ಮ್ಯಾನ್ -ಡಗ್ಲಾಸ್.
99.
ಇಸ್ರೇಲ್- ಜೆರುಸಲೇಮ್.
100.
ಇಟಲಿ- ರೋಮ್.
101.
ಜಮೈಕಾ -ಕಿಂಗಸ್ಟನ್.
102.
ಜಪಾನ್- ಟೊಕಿಯೋ.
103.
ಜರ್ಸಿ- ಸೇಂಟ್ ಹೀಲರ್.
104.
ಜೋರ್ಡಾನ್ -ಅಮ್ಮಾನ್.
105.
ಕಝಕಿಸ್ತಾನ್- ಅಸ್ತಾನಾ.
106.
ಕೀನ್ಯಾ- ನೈರೋಬಿ.
107.
ಕಿರಿಬಾತಿ -ದಕ್ಷಿಣ ತರಾವಾ.
108.
ಕೊಸೊವೋ- ಪ್ರಿಸ್ಟಿನಾ.
109.
ಕುವೈತ್- ಕುವೈತ್ ನಗರ.
110.
ಕಿರ್ಗಿಸ್ತಾನ್- ಬಿಶ್ಕೇಕ್.
111.
ಲಾವೊಸ್- ವಿಯೆನ್ಶಿಯೇನ್.
112.
ಲಾತ್ವಿಯಾ- ರಿಗಾ.
113.
ಲೆಬನಾನ್ -ಬೀರತ್.
114.
ಲೆಸೋತೊ- ಮಾಸೇರು.
115.
ಲೈಬೀರಿಯಾ- ಮೊನ್ರೋವಿಯಾ.
116.
ಲಿಬಿಯಾ- ತ್ರಿಪೋಲಿ.
117.
ಲೀಶೆನ್ ಸ್ಟೈನ್ - ವಾಡುಝ್.
118.
ಲಿಥುಯೇನಿಯಾ- ವಿಲ್ನಿಯಸ್.
119.
ಲುಕ್ಸೆಂಬರ್ಗ್ -ಲುಕ್ಸೆಂಬರ್ಗ್ ನಗರ.
120.
ಮಸಿಡೋನಿಯಾ- ಸ್ಕೋಜೆ.
121.
ಮಡಗಾಸ್ಕರ್- ಅಂಟಾನನರಿವೊ.
122.
ಮಾಲಾವಿ -ಲಿಲೊಂಗ್ವೆ.
123.
ಮಲೇಷಿಯಾ- ಕೌಲಾಲಂಪುರ /
ಪುತ್ರಾಜಯಾ.
124.
ಮಾಲ್ಡೀವ್ಸ್ -ಮಾಲೆ.
125.
ಮಾಲಿ- ಬಮಾಕೊ.
126.
ಮಾಲ್ಟಾ -ವೆಲೆಟ್ಟಾ.
127.
ಮಾರ್ಷಲ್ ದ್ವೀಪಗಳು- ಮಜುರೊ.
128.
ಮಾರಿಷಿಯಾನಾ- ನೌಕ್ಚೋಟ್.
129.
ಮಾರಿಷಿಯಸ್ -ಪೋರ್ಟ್ ಲೂಯಿಸ್.
130.
ಮೇಯೊಟ್ -ಮಾಮೌಡ್ಝು.
131.
ಮೆಕ್ಸಿಕೋ -ಮೆಕ್ಸಿಕೋ ನಗರ.
132.
ಮಾಲ್ಡೋವಾ- ಚಿಸಿನಾಉ.
133.
ಮೊನಾಕೋ- ಮೊನಾಕೊ.
134.
ಮಂಗೋಲಿಯಾ- ಉಲಾನ್ ಬತಾರ್.
135.
ಮಾಂಟೆನೆಗ್ರೋ- ಪೊಡ್ಗೋರಿಕಾ.
136.
ಮಾಂಟ್ಸೆರಾಟ್- ಪ್ಲೈಮೌಥ್.
137.
ಮೊರೊಕ್ಕೋ -ರಾಬಾತ್.
138.
ಮಾಝಾಂಬಿಕ್- ಮಾಪುಟೋ.
139.
ಮಯನ್ಮಾರ್- ನೇಪಿಡಾ.
140.
ನಮೀಬಿಯಾ -ವಿಂಢೋಕ್.
141.
ನೌರು- ಯಾರೆನ್.
142.
ನೇಪಾಳ -ಕಠ್ಮಂಡು.
143.
ನೆದರ್ ಲ್ಯಾಂಡ್ಸ್- ಆ್ಯಮ್
ಸ್ಟರಡಾಮ್.
144.
ನೆದರ್ ಲ್ಯಾಂಡ್ಸ್ ಆ್ಯಂಟಿಲ್ಸ್- ವಿಲ್ಲೆಮಸ್ಟಾಡ್.
145.
ನ್ಯೂ ಕ್ಯಾಲೆಡೋನಿಯಾ -ನೌಮಿಯಾ
146.
ನ್ಯೂಝೀಲ್ಯಾಂಡ್,- ವೆಲಿಂಗ್ಟನ್.
147.
ನಿಕಾರಾಗುಆ- ಮನಾಗುಆ.
148.
ನೈಗರ್- ನಿಯಾಮಿ.
149.
ನೈಜೀರಿಯಾ- ಅಬುಜಾ.
150.
ನ್ಯೂ (niue) -ಅಲೋಫಿ.
151.
ನೊರ್ಫೋಕ್ ದ್ವೀಪಗಳು- ಕಿಂಗಸ್ಟನ್.
152.
ಉತ್ತರ ಕೊರಿಯಾ,- ಪ್ಯೋಂಗ




🌏
ಭೂಮಿ
ಭೂಮಿಯು (ಸೂರ್ಯನಿಂದ 1 .ಮಾ. = ಸೂರ್ಯನಿಂದ 15ಕೋಟಿ ಕಿ.ಮೀ.(ಖಗೋಲಮಾನ) ದೂರದಲ್ಲಿದೆ.
ನಿಖರ ಸರಾಸರಿ ದೂರ 149,598,023 ಕಿಮೀ.(92,955,902 ಮೈಲಿ: ಸೌರ ದಿನಗಳ ಅವಧಿ ಭೂಮಿ ಉಪಸೌರ ಮತ್ತು ಅಪರವಿ ನಡುವಿನ ವ್ಯತ್ಯಾಸ 50 ಲಕ್ಷ ಕಿ.ಮೀ.
ಇದು ಭೂಮಿ ಸೂರ್ಯನನ್ನು ಸುತ್ತುವಾಗ ಹತ್ತಿರದ ಮತ್ತು ದೂರದ ಬಿಂದುಗಳ ವ್ಯತ್ಯಾಸ.
ಭೂಮಿಯ ದ್ರವ್ಯರಾಶಿಯು ಸುಮಾರು 5.98×10 24 ಕಿ.ಗ್ರಾಮ್.ಗಳಷ್ಟಿದೆ.
ಪರಿಭ್ರಮಣ ಕಕ್ಷೆ ಅಂಡಾಕಾರವಾಗಿದೆ).
ಸರಾಸರಿ ತ್ರಿಜ್ಯ 6,372.797 ಕಿ.ಮೀ. ಒಳ ನೈಸರ್ಗಿಕ ಗ್ರಹಗಳಲ್ಲಿ ಇದು ದೊಡ್ಡದು ಮತ್ತು ಹೆಚ್ಚಿನ ಸಾಂದ್ರತೆ (ದಟ್ಟಣೆ)ಯದು.
ಪ್ರಸ್ತುತ ತಿಳಿದಂತೆ ಭೂವೈಜ್ಞಾನಿಕ ಚಟುವಟಿಕೆಯುಳ್ಳ ಮತ್ತು ಜೀವ ಜಾಲ ಅಸ್ತಿತ್ವದಲ್ಲಿರುವ ಒಂದೇ ಗ್ರಹ.
ಭೂಮಿಯ ಜಲಗೋಳ ಗ್ರಹಗಳಲ್ಲಿ ವಿಶಿಷ್ಟವಾಗಿದೆ ಮತ್ತು ಇತರ ಗ್ರಹಗಳಲ್ಲಿ ಕಾಣದ ವಿಶಿಷ್ಟ ಗಮನಾರ್ಹವಾದ ಶಿಲಾಪದರ ರಚನೆಗಳನ್ನು ಹೊಂದಿರುವ ಏಕೈಕ ಗ್ರಹ.
ಭೂಮಿಯ ವಾತಾವರಣದಲ್ಲಿ ಜೀವಿಗಳ ಅಸ್ತಿತ್ವಕ್ಕೆ ಬೇಕಾದ 21% ಆಮ್ಲಜನಕ ಹೊಂದಿರುವ ವಾತಾವರಣವಿದ್ದು ಇತರ ಗ್ರಹಗಳ ವಾತಾವರಣಕ್ಕೆ ಸಂಪೂರ್ಣವಾಗಿ ಭಿನ್ನವಾಗಿದೆ.
🌐ಚಂದ್ರ :
ಭೂಮಿಯು, 3,66,560 ಕಿ.ಮೀ.ಸರಾಸರಿ ದೂರದಲ್ಲಿರುವ , 7.342×10 22 ಕೆ.ಜಿ.ತೂಕದ ನೈಸರ್ಗಿಕ ಉಪಗ್ರಹಗಳಲ್ಲಿಯೇ ದೊಡ್ಡ ನೈಸರ್ಗಿಕ
ಉಪಗ್ರಹ ವಾದ ಚಂದ್ರ ನನ್ನು ಹೊಂದಿದ ವ್ಯವಸ್ಥೆಯುಳ್ಳ ಸೌರ ಗ್ರಹ; ಭೂಮಿಯ ತೂಕದಲ್ಲಿ, ಸುಮಾರು 81 ರಲ್ಲಿ ಒಂದು ಪಾಲು ಇದೆ.
🌐ವಯಸ್ಸು
ಇದರ (ಭೂಮಿಯ) ವಯಸ್ಸು 454 ಕೋಟಿ ವರ್ಷ.
ಸರಾಸರಿ ತ್ರಿಜ್ಯ 6371 ಕಿಮೀ. ಭೂಮಧ್ಯರೇಖೆಯಲ್ಲಿ ಸುತ್ತಳತೆ 40,075. 017 ಕಿಮೀ. (24,901. 461 ಮೈಲಿ).
ಸೂರ್ಯನನ್ನು ಸುತ್ತಲು 365. 256363004 ದಿನ ಬೇಕು.
ಅದು ಸೂರ್ಯನನ್ನು ಸೆಕೆಂಡಿಗೆ 29.78 ಕಿಮೀ. / 18.50ಮೈಲಿ ವೇಗದಲ್ಲಿ ಸುತ್ತವುದು.
ಭೂಮಿಯು ಸೂರ್ಯನನ್ನು ಸುತ್ತುವ ವೇಗ ಗಂಟೆಗೆ 1,07,200ಕಿಮೀ./ 66,600 ಮೈಲಿ. ಭೂಮಿಯ ತೂಕ 5.97237X10 24 ಕೆಜಿ. ಭೂಮಿಯಿಂದ ಚಂದ್ರ 384,000ಕಿ.ಮೀ. ದೂರದಲ್ಲಿದೆ.
ಜೀವದ ಮೊದಲ ಪಳೆಯುಳಿಕೆ ಪುರಾವೆಗಳು,ಪಶ್ಚಿಮ ಆಸ್ಟ್ರೇಲಿಯಾದಲ್ಲಿ ಬಂಡೆಗಳಲ್ಲಿ 4.1 ಶತಕೋಟಿ ವರ್ಷದ "ಜೈವಿಕ ಅವಶೇಷಗಳು" ಕಂಡು ಬಂದಿದೆ.
🌐 ಸೌರ ದಿನಗಳ ಅವಧಿ
ಭೂಮಿಯು ಸೂರ್ಯನನ್ನು 365.26 ಸೌರ ದಿನಗಳ ಅವಧಿಯಲ್ಲಿ ಒಂದು ಬಾರಿ ಸುತ್ತಿ ಬರುವಾಗ ತನ್ನದೇ ಸ್ವಂತ ಅಕ್ಷದ 366,26 ಪಟ್ಟು ತಿರುಗುತ್ತದೆ/ಸುತ್ತುತ್ತದೆ.
ಹೀಗೆ ಒಂದು ಸೌರ ವರ್ಷವನ್ನು ಸೃಷ್ಟಿಸುತ್ತದೆ ಅಥವಾ ಒಂದು ನಾಕ್ಷತ್ರಿಕ ವರ್ಷವನ್ನು ಸೃಷ್ಟಿಸುತ್ತದೆ.
ಹೀಗೆ ಸುತ್ತುತ್ತಾ ಭೂಮಿಯು ತನ್ನ ಅಕ್ಷದ ಅದರ ಕಕ್ಷೀಯ ಸಮತಳಗಳ ಲಂಬಕ್ಕೆ 23.4 ಡಿಗ್ರಿ ಬಾಗಿರುತ್ತದೆ.
ಭೂಗ್ರಹದ ಮೇಲೆ ಇದು ಋತುಗಳ ಪರಿವರ್ತನೆಗೆ ಕಾರಣವಾಗುತ್ತದೆ.
ಭೂಮಿ ತನ್ನ ಅಕ್ಷದ ಮೇಲೆ ತಿರುಗುವ ಸಮಭಾಜಕದ ವೇಗ 1,674.4 ಕಿಮೀ/ಗಂಟೆಗೆ ಅಥವಾ 1,040.4 ಮೈಲಿ ಗಂಟೆಗೆ.



🔴ಪ್ರಮುಖ ಭೌಗೋಳಿಕ ಅನ್ವರ್ಥಕ ನಾಮಗಳು🔴
🌻ಸತ್ವದ್ವೀಪಗಳ ನಗರ ---- ಮುಂಬೈ
🌻 ಸ್ವರ್ಣಮಂದಿರಗಳ ನಗರ --- ಅಮೃತಸರ
🌻 ಏಳುನಗರಗಳ ನಗರ---- ದೆಹಲಿ
🌻 ಭಾರತದ ಯೋಜಿತ ನಗರ--- ಜೈಪುರ
🌻 ಭಾರತದ ರೇಷ್ಮೆಯ ನಗರ--- ಕರ್ನಾಟಕ
🌻 ಭಾರತದ ಉದ್ಯಾನ ನಗರ--- ಬೆಂಗಳೂರು
🌻 ಲವಂಗ ದ್ವೀಪ --- ಜಂಜಿಬಾರ್
🌻 ಪಂಚ ನದಿಗಳ ನಾಡು--- ಪಂಜಾಬ್
🌻 ಕರ್ನಾಟಕದ ಆಟದ ಮೈದಾನ--- ಕೊಡಗು
🌻 ಕರ್ನಾಟಕದ ಮ್ಯಾಂಚೆಸ್ಟರ್ --- ದಾವಣಗೆರೆ
🌻 ಕರ್ನಾಟಕದ ಪಂಜಾಬ್ --- ಅವಿಭಜಿತ ವಿಜಾಪುರ
🌻 ದಕ್ಷಿಣ ಕಾಶಿ--- ಹಲಸಿ ( ಬೆಳಗಾವಿ ಜಿಲ್ಲೆ
🌻 ದೇವಾಲಯದ ವಾಸ್ತು ಶಿಲ್ಪದ ತೊಟ್ಟಿಲು--- ಐಹೋಳೆ
🌻 ಚೀನಾದ ಕಣ್ಣೀರಿನ ನದಿ--- ಹೂ ಹ್ವಾಂಗ್ಹೊ
🌻 ಬಂಗಾಳದ ಕಣ್ಣೀರಿನ ನದಿ--- ದಾಮೋದರ
🌻 ಬಿಹಾರದ ಕಣ್ಣೀರಿನ ನದಿ--- ಕೋಸಿ
🌻 ಅಸ್ಸಾಂನ ಕಣ್ಣೀರಿನ ನದಿ--- ಬ್ರಹ್ಮಪುತ್ರ ನದಿ
🌻 ಹಳದಿ ನದಿ ---- ಹೂಹ್ವಾಂಗ್ ಹೋ ನದಿ( ಚೀನಾ)
🌻 ಮಡಿದವರ ದಿಬ್ಬ --- ಮೊಹೆಂಜೊದಾರೊ
🌻 ಸೂರ್ಯೋದಯದ ನಾಡು---- ಜಪಾನ್
🌻 ಮಧ್ಯರಾತ್ರಿ ಸೂರ್ಯ ಉದಯಿಸುವ ನಾಡು--- ನಾರ್ವೆ
🌻 ಮುಂಜಾನೆಯ ನೀರವತೆಯ ನಾಡು ---- ಕಿರಿಯ
🌻 ಕಾಂಗರೂಗಳ ನಾಡು ---- ಆಸ್ಟ್ರೇಲೀಯಾ
🌻 ಕಿವಿಗಳ ನಾಡು----- ನ್ಯೂಜಿಲ್ಯಾಂಡ್
🌻 ಪೂರ್ವದ ಮುತ್ತು---- ಬಹರೇನ್
🌻 ಬಿಳಿಯಾನೆಗಳ ನಾಡು--- ಥಾಯ್ಲಾಂಡ್
🌻 ಚಿನ್ನದ ಪಗೋಡಗಳ ನಾಡು--- ಮೈನ್ಮಾರ್
🌻 ಜಗತ್ತಿನ ಸಕ್ಕರೆಯ ಬಟ್ಟಲು, --- ಕ್ಯೂಬಾ
🌻 ದಕ್ಷಿಣದ ಬ್ರಿಟನ್ --- ನ್ಯೂಜಿಲ್ಯಾಂಡ್
🌻 ಸಾವಿರ ಸರೋವರಗಳ ನಾಡು---- ಫಿನ್ ಲ್ಯಾಂಡ್
🌻 ಯುರೋಪಿನ ಆಟದ ಮೈದಾನ,--- ಸ್ವಿಟ್ಜರ್ಲೆಂಡ್
🌻 ಯುರೋಪಿನ ರೋಗಗ್ರಸ್ತ ನಾಡು--- ಟರ್ಕಿ
🌻 ಚಿನ್ನದ ಉಣ್ಣೆಗಳ ನಾಡು--- ಆಸ್ಟ್ರೇಲೀಯಾ
🌻 ಕಾಲುವೆಗಳ ನಾಡು--- ವೆನಿಸ್
🌻 ಗುಡುಗುಗಳ ನಾಡು--- ಭೂತಾನ್
🌻 ಕಗ್ಗತ್ತಲೆಯ ಖಂಡ--- ಆಫ್ರಿಕ
🌻 ಮುತ್ತುಗಳ ದ್ವೀಪ--- ಶ್ರೀಲಂಕಾ
🌻 ಜಗತ್ತಿನ ಸಿಲಿಕಾನ್ ವ್ಯಾಲಿ--- ಲಾಸ್ ಏಂಜಿಲಿಸ್
🌻 ಸಪ್ತಗಿರಿಗಳ ನಾಡು--- ರೋಮ್
🌻 ಯುರೋಪಿನ ಕದನ ಮೈದಾನ --- ಬೆಲ್ಜಿಯಂ
🌻 ಉತ್ತರದ ವೆನಿಸ್ ---- ಸ್ಟಾಕ್ ಹೊಮ್
🌻 ಗ್ರೀಕ್ ಕಣ್ಣು ----- ಅಥೆನ್ಸ
🌻 ಪೂರ್ವದ ವೆನಿಸ್ --- ಬ್ಯಾಂಕಾಕ್
🌻 ಬಿಳಿರಷ್ಯಾ--- ಬೆಲಾರಸ್
🌻 ರೇಷ್ಮೇಯ ನಾಡು,--- ಚೀನಾ
🌻 ಪಂಚ ಸಮುದ್ರಗಳ ಬಂದರು --- ಮಾಸ್ಕೋ
🌻 ಐದು ಸಮುದ್ರಗಳ ನಗರ---- ಅರೇಬಿಯನ್ ಪ್ರಸ್ಥಭೂಮಿ.
🌻 ಜಗತ್ತಿನ ಹಣ್ಣಿನ ತೋಟ--- ಮೆಡಿಟರೇನಿಯನ್ ಪ್ರದೇಶ.
🌻 ಆಗ್ನೇಯ ಏಷ್ಯಾ ರಾಷ್ಟ್ರೀಯ ಕೀಲಿ ಕೈ---- ಸಿಂಗಾಪೂರ್
🌻 ಜಗತ್ತಿನ ಮಾಂಸದ ಡಬ್ಬಿ--- ಚಿಕ್ಯಾಗೋ
🌻 ಚಿನ್ನದ ನಾರುಗಳ ನಾಡು---- ಬಾಂಗ್ಲಾದೇಶ
🌻 ಗೋಧಿ & ಮಾಂಸದ ನಾಡು--- ಅರ್ಜೆಂಟೈನ
🌻 ದಶಸಾವಿರ ಉಗಿಬುಗ್ಗೆಗಳ ನಾಡು---- ಅಲಾಸ್ಕಾ
🌻 ಭಾರತದ ಆಟದ ಮೈದಾನ ---- ಕಾಶ್ಮೀರ
🌻 ದೇವರ ಸ್ವಂತ ನಾಡು--- ಕೇರಳ
🌻 ಗೋಧಿಯ ಕಣಜ---  ಪಂಜಾಬ್
🌻 ಪ್ರಪಂಚದ ಗೋಧಿಯ ಕಣಜ--- ರಷ್ಯಾ
🌻 ಭಾರತದ ಅಕ್ಕಿಯ ಬಟ್ಟಲು--- ಛತ್ತಿಸ್ ಗಡ
🌻 ಭಾರತದ ಮ್ಯಾಂಚೆಸ್ಟರ್ ---- ಮುಂಬೈ
🌻 ಉತ್ತರ ಭಾರತದ ಮ್ಯಾಂಚೆಸ್ಟರ್ ---ಕಾನ್ಪುರ
🌻 ದಕ್ಷಿಣ ಭಾರತದ ಮ್ಯಾಂಚೆಸ್ಟರ್ --- ಕೊಯಿಮತ್ತೂರ
🌻 ಅರಮನೆಗಳ ನಗರ--- ಕೊಲ್ಕತ್ತಾ
🌻 ಗುಲಾಬಿ ನಗರ--- ಜೈಪುರದ
🌻 ಮುತ್ತಿನ ನಗರ--- ಹೈದ್ರಾಬಾದ್
🌻 ಉಕ್ಕಿನ ನಗರ--- ಜಮ್ ಷೆಡಪುರ
🌻 ಗೇಟ್ ವೇ ಆಪ್ ಇಂಡಿಯಾ --- ಮುಂಬೈ
🌻 ಇಂಡಿಯಾ ಗೇಟ್---- ದೆಹಲಿ
🌻 ಭಾರತದ ಕಿರೀಟ--- ಕಾಶ್ಮೀರ
🌻 ಭಾರತದ ಮಸಾಲೆ ಪದಾರ್ಥಗಳ ತೋಟ--- ಕೇರಳ
🌻 ಕನಸಿನ ಗೋಪುರದ ನಗರ--- ಆಕ್ಸಫರ್ಢ(ಇಂಗ್ಲೆಂಡ್)
🌻 ಆಕಾಶಚುಂಬಿ ಕಟ್ಟಡಗಳ ನಗರ--- ನ್ಯೂಯಾರ್ಕ
🌻 ಉತ್ತರ ಯುರೋಪಿನ ಕ್ಷೀರ ಕ್ಷೇತ್ರ--- ಡೆನ್ಮಾರ್ಕ್
🌻 ಪಚ್ಚೆ ದ್ವೀಪ--- ಐರ್ಲೆಂಡ್
🌻 ಶಾಶ್ವತ ನಗರ--- ರೋಂ
🌻 ಚಕ್ರಾಧಿಪತ್ಯದ ನಗರ---- ರೋಂ
🌻 ಇಂಗ್ಲೆಂಡಿನ ಉದ್ಯಾನವನ---- ಕೇಂಟ್
🌻 ಕಣ್ಣೀರಿನ ದ್ವಾರ--- ಬಾಬ್ ಯೆಲ್ ಮಾಂಟಬ್( ಜರೊಸಲೆಮ್)
🌻 ನೈಲ್ ನದಿಯ ವರಪ್ರಸಾದ--- ಈಜಿಪ್ಟ
🌻 ಗ್ರಾನೈಟ್ ನಗರ--- ಅಬರ್ಡಿನ್( ಸ್ಕಾಟ್ಲೆಂಡ)
🌻 ನಿರಕ್ತರ ಸಾಮ್ರಾಜ್ಯ ---- ದಕ್ಷಿಣ ಕೋರಿಯಾ
🌻 ಪವಿತ್ರ ಭೂಮಿ--- ಪ್ಯಾಲೆಸ್ತಿನ್
🌻 ಮೆಡಿಟರೇನಿಯನ್ ಸಮುದ್ರದ ಬೀಗದ ಕೈ---- ಜಿಬ್ರಾಲ್ಟರ್
🌻 ಕೇಕ್ ಗಳ ನಾಡು--- ಸ್ಕಾಟ್ಲೆಂಡ್
🌻 ಹಾರುವ ಮೀನಿನ ನಾಡು--- ಬಾರ್ಬಡಾಸ್
🌻 ಯುರೋಪಿನ ಹಿಟ್ಟಿನ ಪಪಾಯಿ--- ಬಾಲ್ಕನ್ಸ
🌻 ಕಡಲ ರಾಣಿ --- ಇಂಗ್ಲೆಂಡ್
🌻 ಶ್ರೀಮಂತ ಕರಾವಳಿ--- ಕೊಸ್ಟಾರಿಕ
🌻 ಗೊಲ್ಡಕೋಷ್ಟ---- ಘಾನಾ
🌻 ಶ್ರೀಮಂತ ಬಂದರು--- ಪ್ಯೂರ್ಟೊರಿಕ
🌻 ಪ್ರಪಂಚದ ಮೇಲ್ಛಾವಣಿ --- ಟಿಬೆಟ್
🌻 ಶ್ವೇತನಗರ,--- ಬೆಲ್ ಗ್ರೇಡ್
🌻 ಗಾಳಿಯ ನಗರ--- ಚಿಕ್ಯಾಗೋ
🌻 ಯುರೋಪಿನ ಯಂತ್ರಾಗಾರ--- ಬೆಲ್ಜಿಯಂ
🌻 ಪ್ರಪಂಚದ ಬ್ರೆಡ್ ಬಾಸ್ಕೇಟ್--- ಉತ್ತರ ಅಮೆರಿಕ ಮೈದಾನ
🌻 ಪ್ರಪಂಚದ ಏಕಾಂತ ದ್ವೀಪ--- ಟ್ರಸ್ಟೆ್ಡ್ ಡಕುನ್ಹಾ
🌻 ಅವಳಿ ನಗರ---- ಬುಡಾಪೆಸ್ಟ್
🌻 ಸೋಳ್ಳೆರಹಿತ ನಾಡು--- ಫ್ರಾನ್ಸ್
🌻 ಬಿಳಿಯ ಖಂಡ--- ಅಂಟಾರ್ಕ್ಟಿಕ
🌻 ಮರಭೂಮಿಗಳ ಖಂಡ--- ಆಸ್ಟ್ರೇಲಿಯ
🌻 ಕೇಂದ್ರೀಯ ಭೂಖಂಡ--- ಆಫ್ರಿಕ
🌻ಸೂರ್ಯ ಮುಳುಗದ ಸಾಮ್ರಾಜ್ಯ --- ಇಂಗ್ಲೆಂಡ






*ಆರ್ಯಭಟದಿಂದ ಜಿಸ್ಯಾಟ್-9 ಉಪಗ್ರಹದವರೆಗೆ: ಇಸ್ರೊ ಸಾಧನೆಯ ಇಣುಕು ನೋಟ*
-----------------------------
*ಭಾರತದ ಏಕೈಕ ಬಾಹ್ಯಾಕಾಶ ಕೇಂದ್ರ ಶ್ರೀಹರಿ ಕೋಟಾದಿಂದ ಜಿಎಸ್ಎಲ್ ವಿ-09 ಉಪಗ್ರಹ ಮೇ 5ರಂದು ಉಡಾವಣೆಗೊಳ್ಳುವ ಮೂಲಕ ಇಸ್ರೋದ ಮತ್ತೊಂದು ಬಾಹ್ಯಾಕಾಶ ಯಾನಕ್ಕೆ ಸಾಕ್ಷಿಯಾಯಿತು.*
*ಕಳೆದ ಫೆಬ್ರವರಿ 15ರಂದು ಭಾರತ 104 ಸ್ಯಾಟಲೈಟ್ ಗಳನ್ನು ಒಂದು ರಾಕೆಟ್ ನಲ್ಲಿ ಉಡಾಯಿಸುವ ಮೂಲಕ ಇತಿಹಾಸ ಸೃಷ್ಟಿಸಿತು. ಮಾಮ್ನಿಂದ ಜಿಎಸ್ಎಲ್ ವಿ-9 ವರೆಗೆ ಆರ್ಯಭಟದಿಂದ ಇಲ್ಲಿಯವರೆಗೆ ಭಾರತ ಉಪಗ್ರಹ ಉಡಾವಣೆಯಲ್ಲಿ ಬಹುದೂರ ಸಾಗಿ ಬಂದಿದೆ.*
*ಹಳೆಯ ನೆನಪಿನ ಬುತ್ತಿಯನ್ನು ಕೆದಕಿದಾಗ ಇಸ್ರೋದ ಮಹತ್ವದ ಹೆಜ್ಜೆ ಗುರುತುಗಳನ್ನು ನೋಡಬಹುದು.*👇🏾👇🏾
*1975, ಆರ್ಯಭಟ*
-------------
*
ಭಾರತದ ಮೊದಲ ಸ್ವದೇಶಿ ನಿರ್ಮಿತ ಉಪಗ್ರಹ ಆರ್ಯಭಟವನ್ನು ಸೋವಿಯತ್ ಒಕ್ಕೂಟ ಉಡಾಯಿಸಿತು. ಅಂತರಿಕ್ಷದಲ್ಲಿ 19 ವರ್ಷಗಳ ಕಾಲ ಪ್ರಯಾಣ ಮಾಡಿ ಭೂ ಕಕ್ಷೆಯನ್ನು ಮರು ಪ್ರವೇಶಿಸಿತು. ಖಗೋಳಶಾಸ್ತ್ರ ಮತ್ತು ಸೌರ ಭೌತಶಾಸ್ತ್ರಕ್ಕೆ ಸಂಬಂಧಿಸಿದ ಪ್ರಯೋಗಗಳನ್ನು ನಡೆಸಲು ಆರ್ಯಭಟ ಉಪಗ್ರಹವನ್ನು ಬಳಸಲಾಯಿತು.*
*1979, ಭಾಸ್ಕರ್*
------------
*
ಅರಣ್ಯ, ಜಲ ವಿಜ್ಞಾನ, ಭೂ ವಿಜ್ಞಾನಕ್ಕೆಸಂಬಂಧಪಟ್ಟ ಅಂಕಿ ಅಂಶಗಳನ್ನು ಸಂಗ್ರಹಿಸಲು ಉಪಗ್ರಹವನ್ನು ಬಳಸಿಕೊಳ್ಳಲಾಗುತ್ತಿದ್ದು ಕಾಪುಸ್ತಿನ್ ಯಾರ್ ನಲ್ಲಿ ಉಡಾಯಿಸಲಾಯಿತು. ಭಾಸ್ಕರ್ ಮೂಲಕವೇ ಟಿ ವಿ ಮತ್ತು ಕ್ಯಾಮರಾಗಳ ಆರಂಭವಾಯಿತು.*
*1980, ರೋಹಿಣಿ*
------------
*
ಎಸ್ಎಲ್ ವಿ-3 ಹಾಗೂ ರೋಹಿಣಿಯನ್ನು ಒಟ್ಟಿಗೆ ಎರಡನೇ ಪ್ರಯೋಗಾತ್ಮಕ ಉಪಗ್ರಹವಾಗಿ ಉಡಾಯಿಸಲಾಯಿತು.ಕಾರ್ಯಾಚರಣೆ ಯಶಸ್ವಿಯಾಯಿತು.*
*1981,ಭಾಸ್ಕರ 2*
-------------
*
ಭೂ ಕಕ್ಷೆಗೆ 1991ರಲ್ಲಿ ಮರು ಪ್ರವೇಶಿಸಿತು ಹಾಗೂ ಭೂಮಿ ಮತ್ತು ನೀರಿನ ವಲಯಗಳ ಬಗ್ಗೆ ಸಾಕಷ್ಟು ಮಾಹಿತಿಯನ್ನು ಸಂಗ್ರಹಿಸಿತು. ಅಸಮರ್ಪಕವಾಗಿ ಕೆಲಸ ಮಾಡಿದಎರಡು ಕ್ಯಾಮರಾಗಳಲ್ಲಿ ಒಂದನ್ನು ಸುಮಾರು 2,000 ಚಿತ್ರಗಳನ್ನು ವಾಪಸ್ಸು ಕಳುಹಿಸಲಾಯಿತು.*
*1982, ಇನ್ಸಾಟ್-1 *
----------------
*
ಅಮೆರಿಕಾ ರಾಕೆಟ್ ಮೂಲಕ ಉಡಾಯಿಸಲಾದ ಸಂವಹನ ಉಪಗ್ರಹ. ಇದು ನಮ್ಮ ದೇಶದ ಮೊದಲ ಹವಾಮಾನಶಾಸ್ತ್ರ ಉಪಗ್ರಹವಾಗಿದೆ.1983, ಇನ್ಸಾಟ್-2ಬಿ: ಇನ್ಸಾಟ್-1ಎಯ ಪ್ರತಿಬಿಂಬವಾಗಿದ್ದು 7 ವರ್ಷಗಳಿಗೂ ಅಧಿಕ ಕಾಲ ಸೇವೆ ಸಲ್ಲಿಸಿದೆ.*
*1988, ಐಆರ್ಎಸ್-1*
-----------------
*
ರಷ್ಯಾ ರಾಕೆಟ್ ಮೂಲಕ ಉಡಾವಣೆಗೊಂಡ ಭಾರತೀಯ ರಿಮೋಟ್ ಸೆನ್ಸಿಂಗ್(ಐಆರ್ಎಸ್) ಉಪಗ್ರಹವಾಗಿದೆ. ಆದರೆ ಕಾರ್ಯಾಚರಣೆ ವಿಫಲವಾಯಿತು.*
*1992, ಇನ್ಸಾಟ್-2ಡಿಟಿ*
-----------------
*1,360
ಕೆಜಿ ತೂಕದ ಉಪಗ್ರಹವನ್ನು ಆರಂಭದಲ್ಲಿ ಅರಬ್ ಮತ್ತು ನಂತರ ಭಾರತೀಯ ಸಂವಹನ ಉಪಗ್ರಹವಾಗಿ ಉಡಾಯಿಸಲಾಯಿತು. ಉದನ್ನು ಫ್ರಾನ್ಸ್ ಗಯಾನಾದಲ್ಲಿ ಉಡಾಯಿಸಲಾಯಿತು.*
*1994,ವಿಸ್ತರಿಸಿದ*
*
ರೋಹಿಣಿ ಉಪಗ್ರಹ ಸರಣಿ*
---------------------------
*
ಅಂತರಿಕ್ಷಕ್ಕೆ ವೈಜ್ಞಾನಿಕ ಮತ್ತು ತಂತ್ರಜ್ಞಾನ ಪೇ ಲೋಡ್ಸ್ ಗಳನ್ನು ಹೊತ್ತೊಯ್ದ ಗುಂಪು ಉಪಗ್ರಹಗಳು ಗಾಮಾ ಕಿರಣ ಸ್ಫೋಟಗಳನ್ನು ಕಂಡು ಹಿಡಿಯುವಲ್ಲಿ ಇದು ಸಹಾಯ ಮಾಡಿದೆ.*
*1997, ಐಆರ್ಎಸ್ 1-ಡಿ*
-----------------
*
ದೂರಸ್ಥಸಂವೇದನಾ ಉಪಗ್ರಹಗಳಲ್ಲಿ ಇದು ಏಳನೆಯದಾಗಿದೆ. ಇದನ್ನುಇಸ್ರೋ ನಿರ್ಮಿಸಿ ಉಡಾಯಿಸಿ,ಕಾರ್ಯನಿರ್ವಹಿಸಿದ ಉಪಗ್ರಹವಾಗಿದೆ. 12 ವರ್ಷಗಳ ಸೇವೆ ನಂತರ 2010ರಲ್ಲಿ ಪೂರ್ಣಗೊಂಡಿತು.*
*2001, ಜಿಸ್ಯಾಟ್-1*
--------------
*
ಜಿಎಸ್ಎಲ್ ವಿ ಅಧಿಕ ಭಾರದ ರಾಕೆಟ್ ನ್ನು ಜಿಸ್ಯಾಟ್-1 ಮೂಲಕ ಯಶಸ್ವಿಯಾಗಿ ಉಡಾಯಿಸಿತು.*
*2002, ಕಲ್ಪನ-1*
-------------
*
ಮೆಟ್ ಸಾಟ್ ದೇಶದ ಮೊದಲ ಮೀಸಲಾದ ಹವಾಮಾನ ಉಪಗ್ರಹವಾಗಿದ್ದು ಅದಕ್ಕೆ ಕಲ್ಪನ ಎಂದು ಮರು ನಾಮಕರಣ ಮಾಡಲಾಯಿತು.*
*ಭಾರತೀಯ ಮೂಲದ ಅಮೆರಿಕ ಗಗನಯಾತ್ರಿ ಕಲ್ಪನಾ ಚಾವ್ಲಾ ಅವರ ಹೆಸರನ್ನು ಇಡಲಾಯಿತು. ಏಳು ವರ್ಷಗಳವರೆಗೆ ಸೇವೆ ಸಲ್ಲಿಸಿದ್ದು ಹವಾಮಾನ ಮತ್ತು ಪರಿಸರದ ಸಂಬಂಧಿತ ಮಾಹಿತಿಯನ್ನು ಒಟ್ಟುಗೂಡಿಸಲು ಬಳಸಲಾಗಿದೆ.*
*2004, ಎಜುಸ್ಯಾಟ್*
--------------
*
ದೇಶದ ಮೊದಲ ಶಿಕ್ಷಣ ಆಧಾರಿತ ಉಪಗ್ರಹವಾಗಿದ್ದು, ಸ್ಮಾರ್ಟ್ ತರಗತಿಗಳ ಪರಿಕಲ್ಪನೆ ಇದರಿಂದ ಹುಟ್ಟಿಕೊಂಡಿತು. ಎರಡು ಮಾರ್ಗಗಳ ಮೂಲಕ ಸಂವಹನ ಇದರಲ್ಲಿ ಸಾಧ್ಯವಿದ್ದು ತರಗತಿಗಳಿಗೆ ಶಿಕ್ಷಣದ ಸಾಮಗ್ರಿಗಳನ್ನು ಪೂರೈಸುತ್ತದೆ.*
*2005, ಕಾರ್ಟೊಸ್ಯಾಟ್-1*
------------------
*
ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್ ಮೂಲಕ ಇದನ್ನು ಉಡಾಯಿಸಲಾಯಿತು. ಪ್ರಾದೇಶಿಕ, ಸ್ಪೆಕ್ಟ್ರಲ್ ಮತ್ತು ರೇಡಿಯೊಮೆಟ್ರಿಕ್ ನಿರ್ಣಯಗಳನ್ನು ಸುಧಾರಿಸುವ ಕಾರ್ಯಾಚರಣೆ ಮತ್ತು ಅಂಕಿಅಂಶಗಳ ಸಂಗ್ರಹವನ್ನು ಹೊಂದಿದೆ.*
*2007, ಕಾರ್ಟೊಸ್ಯಾಟ್-2*
-----------------
*
ಸ್ಪೇಸ್ ಕ್ಯಾಪ್ಸುಲ್ ರಿಕವರಿ ಪ್ರಯೋಗ ಮತ್ತು ಎರಡು ವಿದೇಶಿ ಸ್ಯಾಟಲೈಟ್ ಗಳ ಉಡಾವಣೆಯನ್ನು ಇದು ಹೊಂದಿದೆ.*
*2008, ಚಂದ್ರಯಾನ*
--------------
*
ಶ್ರೀ ಹರಿಕೋಟಾದಿಂದ ಮೊದಲ ಚಂದ್ರಪರಿಶೋಧನೆ ಕಾರ್ಯಾಚರಣೆಯನ್ನು ಕೈಗೊಳ್ಳಲಾಯಿತು. ಇದು ಎರಡು ವರ್ಷಗಳ ಜೀವಿತಾವಧಿ ಹೊಂದಿತ್ತು. ಗ್ರಹಗಳ ಮತ್ತು ದೂರಸ್ಥ ಸಂವೇದನಾ ಕ್ಷೇತ್ರಗಳನ್ನು ಒಳಗೊಂಡಿದೆ.*
*2011, ಯೂತ್ ಸ್ಯಾಟ್*
---------------
*
ಭಾರತ-ರಷ್ಯಾ ಜಂಟಿಯಾಗಿ ಉಡಾಯಿಸಿದ ಉಪಗ್ರಹವಿದು. ಪದವಿ, ಸ್ನಾತಕ ಪದವಿ ಮತ್ತು ಸಂಶೋಧನಾ ತಜ್ಞರನ್ನು ಒಟ್ಟಿಗೆ ತರುತ್ತದೆ. ಭಾರತದಮಿನಿ ಸ್ಯಾಟಲೈಟ್ ಸರಣಿಯ ಭಾಗವಾಗಿದ್ದು ಎರಡನೆಯದಾಗಿದೆ.*
*2013, ಮಾಮ್*
------------
*
ಮಂಗಳಯಾನ ಎಂದು ಕರೆಯಲ್ಪಡುವ ಮಾರ್ಸ್ ಆರ್ಬಿಟರ್ ಮಿಷನ್ ಅಂತರಗ್ರಹ ಸ್ಥಳಕ್ಕೆ ಭಾರತದ ಮೊದಲ ಬಾಹ್ಯಾಕಾಶ ಪ್ರಯಾಣವಾಗಿದೆ.*
*2014, ಜಿಸ್ಯಾಟ್ 16*
---------------
*
ಸಂವಹನ ಉಪಗ್ರಹ. ತೆರೆದ-ಸಾಮರ್ಥ್ಯದ ಆಂಟೆನಾವನ್ನು ಜಿಸ್ಯಾಟ್ 16 ಒಳಗೊಂಡಿದೆ.*
*2015, ಜಿಸ್ಯಾಟ್ 15*
---------------
*
ಕು ಬಾಂಡ್ ನಲ್ಲಿ ಹೊತ್ತೊಯ್ಯುವ ಸಂವಹನ ಟ್ರಾನ್ಸ್ಪೋರ್ಡರ್ಗಳನ್ನು ಒಳಗೊಂಡಿದೆ.*
*2016, ಸ್ಕ್ಯಾಟ್ ಸಾಟ್-1*
-----------------
*
ಚಂಡಮಾರುತ, ಗಾಳಿ, ಹವಾಮಾನ ಮುನ್ಸೂಚನೆ ಕುರಿತು ಮಾಹಿತಿಗಳನ್ನು ಸಂಗ್ರಹಿಸುತ್ತದೆ. 5 ವರ್ಷಗಳ ಜೀವಿತಾವಧಿ ಹೊಂದಿದೆ.*
*2017, ಕಾರ್ಟೊಸ್ಯಾಟ್ 2 ಡಿ*
-------------------
*
ಪಿಎಸ್ಎಲ್ ವಿ ಒಂದು ಉಡಾವಣಾ ವಾಹಕದ ಮೂಲಕ ಏಕಕಾಲಕ್ಕೆ 104 ಸ್ಯಾಟಲೈಟ್ಗಳನ್ನು ಉಡಾಯಿಸಿ ಇತಿಹಾಸ ನಿರ್ಮಿಸಿತು.*
*2017, ಜಿಸ್ಯಾಟ್-9*
--------------
*
ದಕ್ಷಿಣ ಏಷ್ಯಾ ದೇಶಗಳಿಗೆ ನೆರೆಯ ರಾಷ್ಟ್ರಗಳಿಗೆ ಭಾರತ ನೀಡಿದ ಕೊಡುಗೆಯಿದು. ಸಂವಹನ ಉಪಗ್ರಹ.*