Wednesday, 31 January 2018

Kannada Birudugalu

*ಕನ್ನಡದ ಬಿರುದಾಂಕಿತರು*

1 ದಾನ ಚಿಂತಾಮಣಿ *ಅತ್ತಿಮಬ್ಬೆ*
2 ಕನ್ನಡ ಕುಲಪುರೋಹಿತ *ಆಲೂರು ವೆಂಕಟರಾಯ*
3 ಕನ್ನಡದ ಶೇಕ್ಸ್ಪಿಯರ್ *ಕಂದಗಲ್ ಹನುಮಂತರಾಯ*
4 ಕನ್ನಡದ ಕೋಗಿಲೆ *ಪಿ.ಕಾಳಿಂಗರಾವ್*
5 ಕನ್ನಡದ ವರ್ಡ್ಸ್ವರ್ತ್ *ಕುವೆಂಪು*
6 ಕಾದಂಬರಿ ಸಾರ್ವಭೌಮ *ಅ.ನ.ಕೃಷ್ನರಾಯ*
7 ಕರ್ನಾಟಕ ಪ್ರಹಸನ ಪಿತಾಮಹ *ಟಿ.ಪಿ.ಕೈಲಾಸಂ*
8 ಕರ್ನಾಟಕದ ಕೇಸರಿ *ಗಂಗಾಧರರಾವ್ ದೇಶಪಾಂಡೆ*
9 ಸಂಗೀತ ಗಂಗಾದೇವಿ *ಗಂಗೂಬಾಯಿ ಹಾನಗಲ್*
10 ನಾಟಕರತ್ನ *ಗುಬ್ಬಿ ವೀರಣ್ಣ*
11 ಚುಟುಕು ಬ್ರಹ್ಮ *ದಿನಕರ ದೇಸಾಯಿ*
12 ಅಭಿನವ ಪಂಪ *ನಾಗಚಂದ್ರ*
13 ಕರ್ನಾಟಕ ಸಂಗೀತ ಪಿತಾಮಹ *ಪುರಂದರ ದಾಸ*
14 ಕರ್ನಾಟಕದ ಮಾರ್ಟಿನ್ ಲೂಥರ್ *ಬಸವಣ್ಣ*
15 ಅಭಿನವ ಕಾಳಿದಾಸ *ಬಸವಪ್ಪಶಾಸ್ತ್ರಿ*
16 ಕನ್ನಡದ ಆಸ್ತಿ *ಮಾಸ್ತಿ ವೆಂಕಟೇಶ ಅಯ್ಯಂಗಾರ್*
17 ಕನ್ನಡದ ದಾಸಯ್ಯ *ಶಾಂತಕವಿ*
18 ಕಾದಂಬರಿ ಪಿತಾಮಹ *ಗಳಗನಾಥ*
19 ತ್ರಿಪದಿ ಚಕ್ರವರ್ತಿ *ಸರ್ವಜ್ಞ*
20 ಸಂತಕವಿ *ಪು.ತಿ.ನ.*
21 ಷಟ್ಪದಿ ಬ್ರಹ್ಮ *ರಾಘವಾಂಕ*
22 ಸಾವಿರ ಹಾಡುಗಳ ಸರದಾರ *ಬಾಳಪ್ಪ ಹುಕ್ಕೇರಿ*
23 ಕನ್ನಡದ ನಾಡೋಜ *ಮುಳಿಯ ತಿಮ್ಮಪ್ಪಯ್ಯ*
24 ಸಣ್ಣ ಕತೆಗಳ ಜನಕ *ಮಾಸ್ತಿ ವೆಂಕಟೇಶ ಅಯ್ಯಂಗಾರ್*
25 ಕರ್ನಾಟಕ ಶಾಸನಗಳ ಪಿತಾಮಹ *ಬಿ.ಎಲ್.ರೈಸ್*
26 ಹರಿದಾಸ ಪಿತಾಮಹ *ಶ್ರೀಪಾದರಾಯ*
27 ಅಭಿನವ ಸರ್ವಜ್ಞ *ರೆ. ಉತ್ತಂಗಿ ಚೆನ್ನಪ್ಪ*
28 ವಚನಶಾಸ್ತ್ರ ಪಿತಾಮಹ *ಫ.ಗು.ಹಳಕಟ್ಟಿ*
29 ಕವಿಚಕ್ರವರ್ತಿ *ರನ್ನ*
30 ಆದಿಕವಿ *ಪಂಪ*
31 ಉಭಯ ಚಕ್ರವರ್ತಿ *ಪೊನ್ನ*
32 ರಗಳೆಯ ಕವಿ *ಹರಿಹರ*
33 ಕನ್ನಡದ ಕಣ್ವ *ಬಿ.ಎಂ.ಶ್ರೀ*
34 ಕನ್ನಡದ ಸೇನಾನಿ *ಎ.ಆರ್.ಕೃಷ್ಣಾಶಾಸ್ತ್ರಿ*
35 ಕರ್ನಾಟಕದ ಉಕ್ಕಿನ ಮನುಷ್ಯ *ಹಳ್ಳಿಕೇರಿ ಗುದ್ಲೆಪ್ಪ*
36 ವರಕವಿ *ಬೇಂದ್ರೆ*
37 ಕುಂದರ ನಾಡಿನ ಕಂದ *ಬಸವರಾಜ ಕಟ್ಟೀಮನಿ*
38 ಪ್ರೇಮಕವಿ *ಕೆ.ಎಸ್.ನರಸಿಂಹಸ್ವಾಮಿ*
39 ಚಲಿಸುವ ವಿಶ್ವಕೋಶ *ಕೆ.ಶಿವರಾಮಕಾರಂತ*
40 ಚಲಿಸುವ ನಿಘಂಟು *ಡಿ.ಎಲ್.ನರಸಿಂಹಾಚಾರ್*
41 ದಲಿತಕವಿ *ಸಿದ್ದಲಿಂಗಯ್ಯ*
42 ಅಭಿನವ ಭೋಜರಾಜ *ಮುಮ್ಮಡಿ ಕೃಷ್ಣರಾಜ ಒಡೆಯರು*
43 ಪ್ರಾಕ್ತನ ವಿಮರ್ಶಕ ವಿಚಕ್ಷಣ *ಆರ್.ನರಸಿಂಹಾಚಾರ್*
44 ಕನ್ನಡದ ಕಬೀರ *ಶಿಶುನಾಳ ಷರೀಫ*
45 ಕನ್ನಡದ ಭಾರ್ಗವ *ಕೆ.ಶಿವರಾಮಕಾರಂತ*
46 ಕರ್ನಾಟಕದ ಗಾಂಧಿ *ಹರ್ಡೇಕರ್ ಮಂಜಪ್ಪ*

ಹೊನ್ನು.  ಮೆಟಿ

Honnu meti mahiti vedike

*==ಮಾಹಿತಿ ವೇದಿಕೆ==*

*ಭಾರತ ವಿಶ್ವದಲ್ಲಿ 6ನೇ ಶ್ರೀಮಂತ ರಾಷ್ಟ್ರ*
*==============*
*ಹೊಸದಿಲ್ಲಿ: ವಿಶ್ವದಲ್ಲೇ ಅತ್ಯಂತ ಶ್ರೀಮಂತ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಅಮೆರಿಕ ಪಾತ್ರವಾಗಿದೆ. ನ್ಯೂ ವರ್ಲ್ಡ್‌ ವೆಲ್ತ್‌ನ ವರದಿ ಪ್ರಕಾರ ಭಾರತ 6ನೇ ಸಂಪದ್ಭರಿತ ರಾಷ್ಟ್ರವಾಗಿದೆ. *
*"""""""""""""'"""""""""""""*
*ಭಾರತದ ಒಟ್ಟು ಸಂಪತ್ತು ಬರೋಬ್ಬರಿ ರೂ. 5,23,762 ಶತಕೋಟಿ!*
*=============*
*ಟಾಪ್‌ ಶ್ರೀಮಂತ ರಾಷ್ಟ್ರಗಳು (ಡಾಲರ್‌ಗಳಲ್ಲಿ)*
*================*
*1. ಅಮೆರಿಕ - 64,584 ಶತಕೋಟಿ*
*2. ಚೀನಾ - 24,803 ಶತಕೋಟಿ*
*3. ಜಪಾನ್‌ - 19,522 ಶತಕೋಟಿ*
*4. ಬ್ರಿಟನ್‌ - 9,919 ಶತಕೋಟಿ*
*5. ಜರ್ಮನಿ - 9,660 ಶತಕೋಟಿ*
*6. ಭಾರತ - 8,230 ಶತಕೋಟಿ*
*7. ಫ್ರಾನ್ಸ್‌ - 6,649 ಶತಕೋಟಿ*
*8. ಕೆನಡಾ - 6,393 ಶತಕೋಟ*ಿ 
*9. ಆಸ್ಟ್ರೇಲಿಯಾ - 6,142 ಶತಕೋಟಿ*
*10. ಇಟಲಿ - 4,276 ಶತಕೋಟಿ*

*ಜಾಗತಿಕವಾಗಿ ಒಂದೇ ವರ್ಷದಲ್ಲಿ ಅಧಿಕ ಸಂಪತ್ತು ಏರಿಕೆ ಕಂಡ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಿದೆ.*
*============*
* *2016ರಲ್ಲಿ ಭಾರತದ ಸಂಪತ್ತು 6,584 ಶತಕೋಟಿಯಿತ್ತು.*
* *2017ಕ್ಕೆ ಶೇ.25ರಷ್ಟು ಏರಿಕೆ ಕಂಡಿದ್ದು, 8,230 ಡಾಲರ್‌ ಸಂಪತ್ತು ಹೊಂದಿದೆ. ದಶಕಕ್ಕೆ ಹೋಲಿಸಿದರೆ ಶೇ.160ರಷ್ಟು ಹೆಚ್ಚಿನ ಸಂಪತ್ತನ್ನು ಭಾರತ ಹೊಂದಿದೆ.*
* *2007ರಲ್ಲಿ ಭಾರತದ ಸಂಪತ್ತು 3,165 ಶತಕೋಟಿಯಿತ್ತು. ಇದೀಗ 8,230 ಶತಕೋಟಿಗೆ ಏರಿಸಿಕೊಂಡಿದೆ. *

*ಭಾರತದ ಸಂಪತ್ತಿನ ಏರಿಕೆ (ಡಾಲರ್‌ಗಳಲ್ಲಿ)*
*===============*
*2007 - 3,165 ಶತಕೋಟಿ*
*2016 - 6,584 ಶತಕೋಟಿ*
*2017 - 8,230 ಶತಕೋಟಿ*
*================*
*ಚೀನಾದ ಸಂಪತ್ತು ಶೇ.22 ಹೆಚ್ಚಾಗಿದ್ದು, ಒಟ್ಟಾರೆ ವಿಶ್ವದ ಸಂಪತ್ತು ಶೇ.12ರಷ್ಟು ಏರಿಕೆ ಕಂಡುಬಂದಿದೆ.ಭಾರತದ ನೆಲದಲ್ಲಿ 10 ಕೋಟಿಗಿಂತ ಹೆಚ್ಚು ಸಂಪತ್ತು ಹೊಂದಿರುವವರ ಸಂಖ್ಯೆ 3,30,400. 10 ಕೋಟಿಗಿಂತ ಹೆಚ್ಚು ಸಂಪತ್ತು ಹೊಂದಿರುವವರನ್ನು ಅಧಿಕ ಸಂಖ್ಯೆಯಲ್ಲಿ ಹೊಂದಿರುವ ರಾಷ್ಟ್ರಗಳ ಪೈಕಿ ಭಾರತ 9ನೇ ಸ್ಥಾನದಲ್ಲಿದೆ. ನಂ.1 ಸ್ಥಾನದಲ್ಲಿರುವಅಮೆರಿಕದಲ್ಲಿ 10 ಕೋಟಿ ಡಾಲರ್‌ ಸಂಪತ್ತು ಹೊಂದಿರುವವರ ಸಂಖ್ಯೆ 50,47,400.ಭಾರತದಲ್ಲಿ ಸುಮಾರು 20,730 ಬಹು-ಕೋಟ್ಯಾಧಿಪತಿಗಳಿದ್ದಾರೆ. ಈ ಮೂಲಕ ಭಾರತ ವಿಶ್ವದಲ್ಲಿ 7ನೇ ಸ್ಥಾನದಲ್ಲಿ ಕಾಣಿಸಿಕೊಂಡಿದೆ.ಒಟ್ಟು ಸಂಪತ್ತಿನ ಲೆಕ್ಕಾಚಾರದಲ್ಲಿ ರಾಷ್ಟ್ರದ ಪ್ರತಿಯೊಬ್ಬನ ಖಾಸಗಿ ಸಂಪತ್ತನ್ನು ಒಳಗೊಂಡಿದೆ.*

  *==ಮಾಹಿತಿ ವೇದಿಕೆ==*

Honnu meti

*==ಮಾಹಿತಿ ವೇದಿಕೆ==*

*ಬೆಂಗಳೂರು: ನಾಡ ಕಚೇರಿ ವೆಬ್‌ಸೈಟ್‌ ಮೂಲಕ ಸಿದ್ಧ ಪ್ರಮಾಣಪತ್ರವನ್ನು ಯಾವುದೇ ಸ್ಥಳದಿಂದ, ಯಾವುದೇ ಸಮಯದಲ್ಲಿ ಪ್ರಿಂಟ್‌ ‍ಪಡೆಯುವ ವ್ಯವಸ್ಥೆ ಸಾರ್ವಜನಿಕರಿಗೆ ಲಭ್ಯವಿದೆ.*
*===============*
*ದೇಶದಲ್ಲಿ ಇದೇ ಮೊದಲ ಬಾರಿಗೆ ಈ ವ್ಯವಸ್ಥೆ ಅಳವಡಿಸಿಕೊಳ್ಳಲಾಗಿದೆ. ಈ ಕುರಿತು ಸರ್ಕಾರದಿಂದ ಅಧಿಕೃತ ಪ್ರಕಟಣೆ ಹೊರಬಂದಿದೆ.*
*==============*
*800 ಗ್ರಾಮೀಣ ನಾಡ ಕಚೇರಿಗಳಿಂದ ಕಂದಾಯ ಇಲಾಖೆ ಪ್ರತಿ ವರ್ಷ ಸುಮಾರು 1 ಕೋಟಿ ಜಾತಿ ಪ್ರಮಾಣಪತ್ರ, ಆದಾಯ ಹಾಗೂ ವಾಸಸ್ಥಳ ಪ್ರಮಾಣಪತ್ರಗಳನ್ನು ವಿತರಿಸುತ್ತಿದೆ.*
*=============*
*ನಾಡ ಕಚೇರಿ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಮಾಣಪತ್ರ ಪ್ರಿಂಟ್‌ ಪಡೆಯಲು ಲಿಂಕ್‌*
www.nadakacheri.karnataka.gov.in

   *==ಮಾಹಿತಿ ವೇದಿಕೆ==*

Saturday, 20 January 2018

Heading : ಜಲ ಸಂಪನ್ಮೂಲಗಳು
Summary : ಜಲ ಸಂಪನ್ಮೂಲಗಳು (GEO)

ಮುಖ್ಯಾಂಶಗಳು:
• ದಾಮೋದರ ನದಿಯನ್ನು ಬಂಗಾಳದ ಕಣ್ಣೀರಿನ ನದಿ ಎಂದು ಕರೆಯುತ್ತಾರೆ.
• ಬಿಹಾರದ ಕಣ್ಣೀರಿನ ನದಿ ಕೋಸಿ ನದಿ.
• ಕರ್ನಾಟಕದ ದೊಡ್ಡ ನೀರಾವರಿ ಯೋಜನೆ ಕೃಷ್ಣಾ ಮೇಲ್ದಂಡೆ ಯೋಜನೆ.
• ಕಾವೇರಿ ನದಿಗೆ ಶಿವನಸಮುದ್ರ ಎಂಬಲ್ಲಿ ವಿದ್ಯುಚ್ಛಕ್ತಿ ಯೋಜನೆಯನ್ನು ನಿರ್ಮಿಸಲಾಗಿದೆ.
• ಹಿರಾಕುಡ್ ಯೋಜನೆಯನ್ನು ಮಹಾನದಿಗೆ ನಿರ್ಮಿಸಲಾಗಿದೆ.
• ದಾಮೋದರ ನದಿ ಕಣಿವೆ ಯೋಜನೆಯು ಸ್ವತಂತ್ರ ಭಾರತದ ಮೊದಲನೆಯ ವಿವಿದೋದ್ದೇಶನದಿ ಕಣಿವೆ ಯೋಜನೆಯಾಗಿದೆ.
• ಭಾಕ್ರಾ ನಂಗಲ್ ಯೋಜನೆಯು ಭಾರತದಲ್ಲಿಯೇ ಅತ್ಯಂತ ಎತ್ತರವಾದ ವಿವಿದೋದ್ದೇಶ ನದಿ ಕಣಿವೆ ಯೋಜನೆಯಾಗಿದೆ.
• ಭಾಕ್ರಾ ನಂಗಲ್  : ಗೋವಿಂದ ಸಾಗರ : : ತುಂಗಭದ್ರಾ : ಪಂಪಸಾಗರ.
• ಮಹಾನದಿಯನ್ನು ಒರಿಸ್ಸಾದ ಕಣ್ಣೀರಿನ ನದಿ ಎಂದು ಕರೆಯುತ್ತಾರೆ.
• ಹಿರಾಕುಡ್ ಆಣೆಕಟ್ಟು ಭಾರತದಲ್ಲಿಯೇ ಅತ್ಯಂತ ಉದ್ದವಾದ ಆಣೆಕಟ್ಟಾಗಿದೆ.

ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿರಿ.
1. ನೀರಾವರಿ ಎಂದರೇನು? ನೀರಾವರಿಯ ವಿಧಗಳಾವವು?
  ನೀರಾವರಿ ಎಂದರೆ ವ್ಯವಸಾಯ ಭೂಮಿಗೆ ಕೃತಕವಾಗಿ ಕಾಲುವೆ, ಬಾವಿ & ಕರೆಗಳಿಂದ ನೀರು ಸರಬರಾಜು ಮಾಡುವುದಾಗಿದೆ.
ನೀರಾವರಿಯ ವಿಧಗಳು - ಬಾವಿ ನೀರಾವರಿ, ಕಾಲುವೆ ನೀರಾವರಿ & ಕೆರೆ ನೀರಾವರಿ

2. ವಿವಿದೋದ್ದೇಶ ನದಿ ಕಣಿವೆ ಯೋಜನೆ ಎಂದರೇನು? ಅದರ
   ಉದ್ದೇಶಗಳಾವವು?
   ವ್ಯವಸಾಯಕ್ಕೆ ನೀರನ್ನು ಒದಗಿಸುವದಲ್ಲದೆ ಜಲಸಂಪತ್ತಿನ ಗರಿಷ್ಟ ಪ್ರಮಾಣದ ಉಪಯೋಗಕ್ಕಾಗಿ ಹಲವಾರು ಉದ್ದೇಶಗಳನ್ನಿಟ್ಟುಕೊಂಡು ರೂಪಿಸಿದ ಯೋಜನೆಯನ್ನು ವಿವಿದೋದ್ದೇಶ ನದಿ ಕಣಿವೆ ಯೋಜನೆ ಎಂದು ಕರೆಯುತ್ತಾರೆ.
ವಿವಿದೋದ್ದೇಶ ನದಿ ಕಣಿವೆ ಯೋಜನೆಯ ಉದ್ದೇಶಗಳು
• ನೀರಾವರಿ ಸೌಲಭ್ಯವನ್ನು ಒದಗಿಸುವದು.
• ಜಲವಿದ್ಯುಚ್ಛಕ್ತಿ ಉತ್ಪಾದಿಸುವದು.
• ನದಿಗಳ ಪ್ರವಾಹಗಳನ್ನು ನಿಯಂತ್ರಿಸುವದು.
• ನೌಕಾಯಾನದ ಸೌಲಭ್ಯವನ್ನು ಒದಗಿಸುವದು.
• ಗೃಹಬಳಕೆ ಹಾಗೂ ಕೈಗಾರಿಕೆಗಳಿಗೆ ನೀರನ್ನು ಒದಗಿಸುವದು.
• ಮಣ್ಣಿನ ಸವಕಳಿಯನ್ನು ನಿಯಂತ್ರಿಸುವದು.
• ಮೀನುಗಾರಿಕೆಯನ್ನು ಅಭಿವೃದ್ಧಿಪಡಿಸುವುದು.
• ಅರಣ್ಯ ಸಂಪತ್ತನ್ನು ವೃದ್ಧಿಸುವದು.

3. ಸರ್ವಕಾಲಿಕ ಕಾಲುವೆ ಎಂದರೇನು?
   ನದಿಗಳಿಗೆ ಆಣೆಕಟ್ಟನ್ನು ಕಟ್ಟಿ ಜಲಾಶಯಗಳನ್ನು ನಿರ್ಮಿಸಿ, ನೀರನ್ನು ಸಂಗ್ರಹಿಸಿ, ಕೃಷಿ ಭೂಮಿಗೆ ನೀರನ್ನೊದಗಿಸಲು ತೋಡುವ ಕಾಲುವೆಗಳಿಗೆ ‘ಸರ್ವಕಾಲಿಕ ಕಾಲುವೆ’ಗಳೆಂದು ಕರೆಯುವರು.

4. ಭಾಕ್ರಾನಂಗಲ್ ಯೋಜನೆಯನ್ನು ಕುರಿತು ಬರೆಯಿರಿ.
• ಭಾಕ್ರಾ ನಂಗಲ್ ಯೋಜನೆಯು ಭಾರತದಲ್ಲಿಯೇ ಅತ್ಯಂತ ಎತ್ತರವಾದ ವಿವಿದೋದ್ದೇಶ ನದಿ ಕಣಿವೆ ಯೋಜನೆಯಾಗಿದೆ.
• ಹಿಮಾಚಲ ಪ್ರದೇಶದ ಭಾಕ್ರಾ & ನಂಗಲ್ ಎಂಬಲ್ಲಿ ಸಟ್ಲೆಜ್ ನದಿಗೆ ಆಣೆಕಟ್ಟುಗಳನ್ನು ಕಟ್ಟಲಾಗಿದೆ.
• ಹಿಮಾಚಲ ಪ್ರದೇಶ & ದೆಹಲಿಗಳು ನೀರಾವರಿ & ವಿದ್ಯುಚ್ಛಕ್ತಿ ಸೌಲಭ್ಯವನ್ನು ಪಡೆಯುತ್ತವೆ.
• ಈ ಜಲಾಶಯವನ್ನು ಗೋವಿಂದಸಾಗರ ಎಂದು ಕರೆಯುತ್ತಾರೆ.

5. ಮಳೆಕೊಯ್ಲು ಅಥವಾ ಮಳೆ ನೀರಿನ ಸಂಗ್ರಹಣೆ ಇಂದು ಕಡ್ಡಾಯವಾಗಿದೆ. ಏಕೆ?
• ಭಾರತದಲ್ಲಿ ಜಲಸಂಪತ್ತು ಅಪಾರ ಪ್ರಮಾಣದಲ್ಲಿದ್ದರೂ ಅದು ಅಸಮಾನತೆಯಿಂದ ಕೂಡಿದೆ.
• ಮಳೆಗಾಲದ ಅವಧಿ ಕಡಿಮೆ ಇದ್ದು ಬೇಸಿಗೆಯಲ್ಲಿ ನೀರಿನ ಕೊರತೆ ಕಂಡುಬರುತ್ತದೆ.
• ದೇಶದಲ್ಲಿ ಕಂಡುಬರುತ್ತಿರುವ ಜಲಕ್ಷಾಮದ ಪರಿಹಾರಕ್ಕೆ ಇರುವ ಸರಳ ಮಾರ್ಗವೆಂದರೆ
• ಮಳೆ ಕೊಯ್ಲು ಅಥವಾ ಮಳೆ ನೀರಿನ ಸಂಗ್ರಹಣೆ ಮಾಡುವುದು ಇಂದು ಕಡ್ಡಾಯವಾಗಿದೆ.

6. ಕರ್ನಾಟಕದ ಜಲವಿದ್ಯುತ್ ಉತ್ಪಾದನಾ ಕೇಂದ್ರಗಳನ್ನು ಹೆಸರಿಸಿ.
   ಶಿವನಸಮುದ್ರ, ತುಂಗಭದ್ರಾ, ಜೋಗ, ಭದ್ರಾ, ಕೃಷ್ಣಾ ಯೋಜನೆ, ಕಾಳಿ ಯೋಜನೆಗಳು ಕರ್ನಾಟಕದ ಪ್ರಮುಖ ಜಲವಿದ್ಯುತ್ ಉತ್ಪಾದನಾ ಕೇಂದ್ರಗಳಾಗಿವೆ.

7. ಸಣ್ಣ ಹಿಡುವಳಿದಾರರಿಗೆ ಬಾವಿ ನೀರಾವರಿಯು ಅತ್ಯಂತ
   ಸೂಕ್ತವಾದದು ಏಕೆ?
  ಸಣ್ಣ ಹಿಡುವಳಿದಾರರರಿಗೆ ಬಾವಿ ನೀರಾವರಿಯು ಸೂಕ್ತವಾದದು ಏಕೆಂದರೆ ಬಾವಿಗಳ ನಿರ್ಮಾಣಕ್ಕೆ ಅಧಿಕ ಬಂಡವಾಳ ಅಥವಾ ತಾಂತ್ರಿಕತೆಯ ಅವಶ್ಯಕತೆ ಇಲ್ಲ. ವರ್ಷದ ಎಲ್ಲಾ ಕಾಲದಲ್ಲಿಯೂ ಬಾವಿಗಳಿಂದ ನೀರಾವರಿ ಸೌಲಭ್ಯ ಸಾಧ್ಯ.

8. ರಾಷ್ಟ್ರೀಯ ವಿದ್ಯುತ್ ಜಾಲ ಎಂದರೇನು?
   ಹೆಚ್ಚುವರಿ ವಿದ್ಯುತ್ತನ್ನು ಕೊರತೆಯಿರುವ ಪ್ರದೇಶಗಳಿಗೆ ಸಾಗಿಸಲು ಹಾಗೂ ವಿದ್ಯುತ್ತನ್ನು ಸಮರ್ಪಕವಾಗಿ ಪ್ರಸರಣ ಮಾಡಲು ಅಳವಡಿಸಿರುವ ವಿದ್ಯುತ್ ಜಾಲವನ್ನೇ ರಾಷ್ಟ್ರೀಯ ವಿದ್ಯುತ್ ಜಾಲ ಎನ್ನುವರು.

9. ಭಾರತದ ಪ್ರಮುಖ ವಿವಿದೋದ್ದೇಶ ನದಿ ಕಣಿವೆ ಯೋಜನೆಗಳು
ಯಾವವು?
• ದಾಮೋದರ ನದಿ ಕಣಿವೆ ಯೋಜನೆ 2. ಭಾಕ್ರಾ ನಂಗಲ್ ಯೋಜನೆ
• ಕೋಸಿ ಯೋಜನೆ 4. ಹಿರಾಕುಡ್ ಯೋಜನೆ
• ತುಂಗಭದ್ರಾ ಯೋಜನೆ 6. ನಾಗಾರ್ಜುನ ಸಾಗರ ಯೋಜನೆ
• ಕೃಷ್ಣಾ ಮೇಲ್ದಂಡೆ ಯೋಜನೆ 8 ನರ್ಮದಾ ನದಿ ಕಣಿವೆ ಯೋಜನೆ.

10. ಮಳೆ ಕೊಯ್ಲಿನಲ್ಲಿ ಎಷ್ಟು ಪ್ರಕಾರ? ಅವು ಯಾವವು?
• ಮಳೆ ಬಿದ್ದ ಸ್ಥಳದಲ್ಲಿಯೇ ನೀರನ್ನು ಸಂಗ್ರಹಿಸುವದು. ಉದಾ : ಮನೆಯ ಮೇಲ್ಚಾವಣಿಯಿಂದ.
• ಮಳೆ ಬಿದ್ದ ನಂತರ ಹರಿಯುವ ನೀರನ್ನು ಸಂಗ್ರಹಿಸುವದು. ಉದಾ : ಒಡ್ಡು ಕಟ್ಟಿ ನೀರನ್ನು ಸಂಗ್ರಹಿಸುವದು

ಹೊನ್ನು ಮೇಟಿ