ಅಮ್ಮ ಮರೆಯಲಾಗದ ಬಂಧನ ... ಜಗದೊಳಗೆ ಅತ್ಯಂತ ಶ್ರೇಷ್ಟವಾದ ವ್ಯಕ್ತಿ ಎಂದರೆ ತಾಯಿ ಒಬ್ಬಳೇ .. ಪದಗಳ ಪಂಜರವನ್ನು ಜೊಡಿಸಿ ವರ್ಣಿಸಿದರು ಸಾಲುದು ಆಕೆಯ ಋಣ ತಿರಿಸಲು ,,ನಾವೆಲ್ಲಾ ಆಡಂಬರದ ದಿನದಲ್ಲಿ ನಮ್ಮ ತಾಯಿ ಬಗ್ಗೆ ಕಾಳಜಿ ಇಲ್ಲ ,,,ಅವಳ ತ್ಯಾಗವನ್ನ ತೀರಿಸಲು ಏಳೇಳು ಜನ್ಮವು ತಿರದು . ನಾವ ಚಿಕ್ಕವರ ಇದ್ದಾಗ ತನ್ನ ಸಂತೋಷ ತ್ಯಜಿಸಿ ,ಮುಗಳನ್ನಗತ ಕೈ ತುತ್ತು ತಿನಿಸಿದಳು ,,ಬಡತನದ ಬಂಡಿಯಲ್ಲಿ ಅಪ್ಪನಿಗೆ ಹೆಗಲಾಗಿ ಸಂಸಾರದ ಪ್ರಯಾಣ ಸಾಗಿಸದಳು ,ಬಂದುಗಳೆಲ್ಲಾ ದೂರವಾದಾಗ ಅಪ್ಪನಿಗೆ ಧೈರ್ಯ ತುಂಬಿದಳು ,, ಸುಡುವ ಬಿಸಿಲನ ಧಗೆಯಲ್ಲಿ ಹಗಲೆನ್ನದೆ ಸೂರ್ಯ ನಾಚಿ ಮರೆಯಾಗುವರೆಗೆ ದುಡಿದಳು ,,ಬಡತನದ ಸೂರಿನಲ್ಲಿ ರಾಜನಂತೆ ಕೈ ತುತ್ತು ಬಡಿಸಿದಳು ,,ಮಕ್ಕಳಿಗೆ ಬಡತನದ ಕೊರಗು ಬೇಡವೆಂದು ಕೂಡಿಟ್ಟ ಹುಂಡಿಯ ಹಣ ಕೊಟ್ಟು ಶಾಲೆಗೆ ಸೇರಿಸದಳು ,,,
ದಿನಗಳೆಲ್ಲ ಉರಳಿದರು ಜಗವೆಲ್ಲಾ ಬದಲಾದರು ,ತಾಯೀ ಪ್ರೀತಿ ಮಾತ್ರ ಬದಲಾಗಿಲ್ಲ ,,,,,ಇದು ಬೇರೆಯವರ ಕತೆಯಲ್ಲ ನಮ್ಮ -ನಿಮ್ಮ ತಾಯಿಯ ಪ್ರೀತಿಯ ಕತೆ ,, ನಾವೆಲ್ಲ ಬದಲಾಗಿದಿವಿ ನಮ್ಮ ತಂದೆ-ತಾಯಿಯ ಪ್ರೀತಿ ಮಾತ್ರ ಬದಲಾಗಿಲ್ಲ ,, ಅವರಿಗೆ ವಯಸ್ಸಾಗಿದೆ ,ಅವರಿಗೆ ಯಾವ ಅಸೆ ಇಲ್ಲ,,,, ಅವರೆಗೆ ಬೇಕಾಗಿರೊದ ನಮ್ಮ ಪ್ರೀತಿ ,,ನಾವೇನ ಅವರನ್ನ ಬಂಗಾರದ ಅರಮನೆಯಲ್ಲಿ ಇರಿಸಿದರು ಬಂಡೆ ಕಲ್ಲಿನ ಮೇಲೆ ನೀರ ಸುರಿದಂತೆ ,ಪ್ರೀತಿ ಯಿಂದ ನಾಲ್ಕ ಮಾತಾಡಿದರೆ ಸಾಕು ,ಅದೆಷ್ಟೋ ಖುಷಿ ಆಗುತ್ತೆ ,ದಿನಾಲು ಮೊಬೈಲ ನಲ್ಲಿ ಕಾಲ ಕಳೆಯುವದಕಿಂತ ಹೆತ್ತವರ ಜೊತೆ ಮಾತಾಡಿದರ ನಮ್ಮ ಜೀವನ ಪಾವನವಾಗುತ್ತ. ಈಗ ನಮ್ಮ ತಂದೆ-ತಾಯಿ ಜೊತೆ ನಾವ ಹೇಗ ಇರತಿವಿ ,,ಹಾಗೆ ನಾವು ವಯಸ್ಸಾದ ಮೇಲೆ ಅದೆ ಕೊರಗು ಮುಂದ ಒಂದ ದಿನ ನಾವು ಅನಭವಿಸಬೇಕುಗತ್ತೆ ,,ನಮಗಾಗಿ ತಮ್ಮ ಜೀವನ ತ್ಯಾಗ ಮಡಿವರೆಗೆ ಗೋಪುರವಿಟ್ಟು ಪೂಜಿಸಿದರು ನಮ್ಮ ಋಣ ತಿರಲ್ಲ ,,
ನಿಮ್ಮ ಹಳ್ಳಿಯಲ್ಲಿ ,ಪಟ್ಟಣದಲ್ಲಿ ಇರುವ ಸ್ನೇಹಿತರಿಗೂ ಹೇಳಿ ,ತಾಯಿಯನ್ನ ಚೆನ್ನಾಗಿ ನೋಡಕೋ ಅಂತ ,ಒಬ್ಬ ತಾಯಿಗೂ ನೋವ ಆದರು ನಮ್ಮ ತಾಯಿಗೆ ನೋವ ಆದಂತೆ ,,,ಕಳೆದ ದಿನಗಳ ಮರೆತು ಹೊಸ ಬೆಳಕಿನತ್ತ ಸಾಗಿ ,,ನಿಮ್ಮ ತಂದೆ-ತಾಯಿಯ ಆಶೀರ್ವಾದ ಬೇಕು ,ಅವರ ಪ್ರೀತಿ ಮತ್ತೆ ಮಗುವಾಗಿ ಬಾಳು ,,ನಿಮ್ಮ ತಾಯಿನ ಕೇಳಿದೆ ಅಂತ ಹೇಳಿ ....






