Thursday, 17 August 2017

ಒಂದು ಸಾರಿ ಒಬ್ಬ ರಾಜ ಕುದುರೆಯ ಮೇಲೆ ಸವಾರಿ ಮಾಡುತ್ತಾ ಊರಿನೊಳಗೆ ಬಂದ.
ಒಂದು ಮನೆಯ ಹತ್ತಿರ ನಿಂತು ಕೊಂಡ. ಮನೆಯ ಹೆಣ್ಣು ಮಗಳು ಗಂಡನಿಗೆ ಊಟವನ್ನು ಬಡಿಸುತ್ತಿದ್ದಳು.
ಮನೆಯೊಡತಿ ತುಂಬಾ ಸುಂದರವಾಗಿ ಇದ್ದಳು. ರಾಜನಿಗೆ ಆಶ್ಚರ್ಯವಾಯಿತು...ನನ್ನ ರಾಜ್ಯದಲ್ಲಿ ಇಂಥಾ ಚೆಲುವೆಯನ್ನು ಇದುವರೆಗೂ ನೋಡಿಲ್ಲ ಅಂತ ಅಂದುಕೊಂಡ.
ಆವಳ ಗಂಡ ಊಟ ಮುಗಿಸಿಕೊಂಡು ತನ್ನ ವ್ಯವಹಾರಕ್ಕೆ ಹೊರಗೆ ಹೋದನು.
ಅವಳು ಗಂಡನನ್ನು ಕಳಿಸಿ ಬಾಗಿಲನ್ನು ಹಾಕಿಕೊಂಡಳು.
ರಾಜನು ಮನೆಯ ಹತ್ತಿರ ಬಂದು ಬಾಗಿಲನ್ನು ಬಡಿದ.
ಅವಳು ಬಂದು ಬಾಗಿಲನ್ನು ತೆರದಳು.
ರಾಜ ಒಳಗೆ ಬಂದು ಒಂದು ಆಸನದಲ್ಲಿ  ಕುಳಿತು ಕೊಂಡ. ರಾಜನು ತನ್ನ ಬಗ್ಗೆ ಎಲ್ಲಾ ಹೇಳಿಕೊಂಡ...ಅವಳನ್ನು ತನ್ನ ಹೆಂಡತಿ ಆಗಬೇಕೆಂದು ಕೇಳಿಕೊಂಡ ...ಒಂದು ವೇಳೆ ಅವಳು ಒಪ್ಪಿದರೆ ಅವಳಿಗೆ ರಾಣಿಯ ಸ್ಥಾನ ಮಾನ ಕೊಡುವದಾಗಿ ಹೇಳಿಕೊಂಡ.
ಅವಳು ಗುಣವಂತಿ ಮತ್ತು ಸಂಸ್ಕಾರ ಹೊಂದಿರುವ ಮಹಿಳೆ ಆಗಿದ್ದಳು..ಅವಳು ರಾಜನಿಗೆ ಹೇಳಿದಳು.."ಮಹಾರಾಜ ನಿಮ್ಮ ಆಸೆ ನೆರವೇರಿಸುತ್ತೇನೆ..
ನೀವು ದಣಿದು ಬಂದಿದ್ದೀರಿ ..ನಿಮಗೆ ದೇಹದ ಹಸಿವು ಮತ್ತು ಮನಸ್ಸಿನ ಹಸಿವು (ವಿಷಯ ಸುಖದ ಹಸಿವು) ಆಗಿದೆ ನೀವು ಬೇಗನೇ ಕೈಕಾಲು ತೊಳೆದುಕೊಂಡು
ನನ್ನ ಗಂಡ ಈಗತಾನೆ ಬಾಳೆಯಲೆಯಲ್ಲಿ  ಊಟಮಾಡಿ ಹೋಗಿದ್ದಾನೆ...ನೀವು  ಇದೇ  ಎಲೆಯಲ್ಲಿ  ಕುಳಿತುಕೊಂಡು ಊಟ ಮಾಡಿ ,ನಿಮಗೆ  ತೃಪ್ತಿ ಆಗುವಷ್ಟು ಬಡಿಸುತ್ತೇನೆ...ಆಮೇಲೆ ನಿಮ್ಮ ನ್ನು ಪ್ರೀತಿಸುತ್ತೇನೆ ".
ರಾಜ ಹೇಳಿದ, "ನಾನು ರಾಜ್ಯದ ಮಹಾರಾಜ ..ನಿನ್ನ ಗಂಡ ಊಟಮಾಡಿ ಬಾಳೆಯಲೆಯನ್ನು ಎಂಜಲು ಮಾಡಿದ್ದಾನೆ... ಎಂಜಲು ಎಲೆಯಲ್ಲಿ  ನಾನು ಹೇಗೆ ಊಟಮಾಡಲಿ...?"
ಗುಣವಂತೆ ಹೇಳಿದಳು.." ಮಹಾರಾಜ ನನ್ನ ಗಂಡ ದೇಹವನ್ನು ಎಂಜಲು ಮಾಡಿಲ್ಲವೇ... ದೇಹವನ್ನು ಪ್ರೀತಿಸಲು ಎಂಜಲು ಅಡ್ಡ ಬರಲಿಲ್ಲ ಅಂದಮೇಲೆ ...ಊಟಮಾಡಲು ಎಂಜಲು ಹೇಗೆ ಅಡ್ಡ ಬರುತ್ತದೆ ..?
ರಾಜನಿಗೆ ತನ್ನ ತಪ್ಪಿನ ಅರಿವಾಯಿತು ..ಅವಳ ಕ್ಷಮೆ ಕೇಳಿ ಅರಮನೆಗೆ ಹೋದನು.

                                               HONNU METI


No comments:

Post a Comment